

ಮುಂಡರಗಿ: ಮೇಯಲು ಹೋಗಿದ್ದ 280ಕ್ಕೂ ಹೆಚ್ಚು ಕುರಿ ಮತ್ತು ಆಡುಗಳು ಏಕಾಏಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ಬೀಡನಾಳ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬೆಳಗ್ಗೆ ಊರ ಹೊರವಲಯದಲ್ಲಿ ಮೇಯಿಸಿಕೊಂಡು ನಂತರ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆ ಕಟಾವು ಮಾಡಿದ್ದ ಜಮೀನೊಂದಕ್ಕೆ ತೆರಳುತ್ತಿದ್ದಾಗ ಬಹುತೇಕ ಕುರಿ ಮತ್ತು ಆಡುಗಳು ಕುಸಿದು ಬಿದ್ದು ಸತ್ತಿವೆ. ಸಾವಿಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ. ಎಲ್ಲವೂ ಗ್ರಾಮದ ಕುರಿಗಾರರಿಗೆ ಸೇರಿದ್ದು, ಸುಮಾರು 1500ಕ್ಕೂ ಹೆಚ್ಚು ಕುರಿ, ಆಡುಗಳ ಪೈಕಿ 280ಕ್ಕೂ ಹೆಚ್ಚು ಕುರಿ, ಆಡುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಸಾವನ್ನಪ್ಪಿದ ಕುರಿ, ಆಡುಗಳ ಮುಂದೆ ಕುರಿಗಾರರು ಕಣ್ಣೀರು ಹಾಕಿದರು. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು.
ಸ್ಥಳಕ್ಕೆ ಪಿಎಸ್‌ಐ ಸುಮಾ ಗೊರಬಾಳ ಹಾಗೂ ಪಶು ಸಂಗೋಪನೆ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ 177 ಕುರಿ ಮತ್ತು ಆಡುಗಳು ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ.