

ಬಾದಾಮಿ : ದಾವಣಗೆರೆಯಲ್ಲಿ ಆ. 3ರಂದು ಜರುಗಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವ ಸಮಾರಂಭದಲ್ಲಿ ತಾಲೂಕಿನಿಂದ 25 ಸಾವಿರಕ್ಕೂ ಅಧಿಕ ಅಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಹೊಳೆಬಸು ಶೆಟ್ಟರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಿಂದ 40 ರಿಂದ 50 ಕೆಎಸ್‌ಆರ್‌ಟಿಸಿ ಬಸ್‌ಗಳು, 400ರಿಂದ 500 ಕ್ರೂಸರ್, 120 ಮಿನಿ ಬಸ್ ಸೇರಿದಂತೆ 600 ಕ್ಕೂ ಹೆಚ್ಚಿನ ವಾಹನಗಳಲ್ಲಿ ಜನರು ತೆರಳಲಿದ್ದಾರೆ. ಮಾರ್ಗ ಮಧ್ಯೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ ಎಂದರು.
ಮುಖಂಡ ಎಂ.ಬಿ. ಹಂಗರಗಿ ಮಾತನಾಡಿ, ಧೀಮಂತ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನೋತ್ಸವಕ್ಕೆ ಮೂಲೆ ಮೂಲೆಯಿಂದ ಜನಸಾಗರ ಹರಿದು ಬರಲಿದೆ. ತಾಲೂಕಿನ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಎಂ.ಎಚ್. ಚಲವಾದಿ ಮಾತನಾಡಿ, ಸಿದ್ದರಾಮಯ್ಯ ಅವರ ಜನ್ಮದಿನೋತ್ಸವ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣೆ ಹಿಡಿದು ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ ಎಂದರು.
ಬ್ಲಾಕ್ ಅಧ್ಯಕ್ಷ ಹನುಮಂತಗೌಡ ಯಕ್ಕಪ್ಪನವರ, ಮುಖಂಡರಾದ ಪಿ.ಆರ್. ಗೌಡರ, ರಾಜಮಹಮ್ಮದ್ ಬಾಗವಾನ, ಮಹೇಶ ಹೊಸಗೌಡರ, ಮಲ್ಲಣ್ಣ ಯಲಿಗಾರ, ಎ್.ಆರ್. ಪಾಟೀಲ, ಶಶಿಕಾಂತ ಊದಗಟ್ಟಿ, ಮಧು ಯಡ್ರಾಮಿ, ವೆಂಕಣ್ಣ ಹೊರಕೇರಿ, ಬಸವರಾಜ ಬ್ಯಾಹಟ್ಟಿ, ಮಹಾಂತೇಶ ಹಟ್ಟಿ ಇತರರಿದ್ದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ ಮತ್ತು ಜನಪರ ಯೋಜನೆಗಳು ಜನಮಾನಸದಲ್ಲಿ ಉಳಿದಿವೆ. ರಾಜ್ಯದಲ್ಲಿಯೇ ಬಾದಾಮಿಯನ್ನು ಹೆಚ್ಚು ಅಭಿವೃದ್ಧಿಗೊಳಿಸಿದ ಶ್ರೇಯಸ್ಸು ಅವರಿಗಿದೆ. ಹೀಗಾಗಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ.ಹೊಳೆಬಸು ಶೆಟ್ಟರ, ಕಾಂಗ್ರೆಸ್ ಯುವ ಮುಖಂಡ