ಮಂಜೇಶ್ವರದಲ್ಲಿ 25ಕ್ಕೂ ಅಧಿಕ ಮನೆಗಳು ಜಲಾವೃತ

New Project (2)
Published on

ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನ್ ಹಾಗೂ ಪರಿಸರದಲ್ಲಿ ಭಾರಿ ಮಳೆಯಿಂದ 25ಕ್ಕೂ ಅಧಿಕ ಮನೆಗಳು ಜಲಾವೃತಗೊಂಡು ಮನೆಯೊಳಗಿದ್ದ ದಾಖಲೆ ಪತ್ರಗಳು, ವಿವಿಧ ಸಾಮಗ್ರಿಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ಸೊತ್ತುಗಳು ನಾಶಗೊಂಡಿವೆ.

ಮಂಜೇಶ್ವರ ಗ್ರಾ.ಪಂ. ಅಧಿಕೃತರ ನಿರ್ಲಕ್ಷೃ ಇದಕ್ಕೆ ಕಾರಣ ಎಂಬ ಆರೋ ವ್ಯಕ್ತವಾಗಿದೆ. ಮಂಜೇಶ್ವರ ರೈಲ್ವೇ ಹಳಿಯ ಪರಿಸರದಲ್ಲಿರುವ ಸುರುಮ ತೋಡಿನಲ್ಲಿ ಭಾರಿ ಪ್ರಮಾಣದ ತ್ಯಾಜ್ಯಗಳು ತುಂಬಿ, ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಕೃತಕ ನೆರೆ ಸೃಷ್ಟಿಯಾಗಿದೆ. ಗ್ರಾ.ಪಂ. ನಿರ್ಲಕ್ಷೃ ಹಿನ್ನೆಲೆಯಲ್ಲಿ ಆಕ್ರೋಶಿತರಾದ ಗ್ರಾಮಸ್ಥರು ಮಂಜೇಶ್ವರ ಫ್ಲಡ್ ವಿಕ್ಟಿಂಸ್ ಅಸೋಸಿಯೇಷನ್ ಎಂಬ ಸಂಟನೆ ರಚಿಸಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ.

ಮೇ 29ರಂದು ರಾತ್ರಿ ನಿಭಾರಿ ಮಳೆಯ ಪರಿಣಾಮ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರೈಲ್ವೆ ನಿಲ್ದಾಣದ ಪಶ್ಚಿಮ ಭಾಗದಲ್ಲಿ ಹರಿಯುವ ಹಳ್ಳ ಕೊಳಚೆಯಿಂದ ತುಂಬಿದ್ದು, ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸೋಮವಾರ ಸುರಿದ ಭಾರಿ ಮಳೆಗೆ ಮತ್ತೆ ಮನೆಗಳು ಜಲಾವೃತಗೊಳ್ಳುತ್ತಿದ್ದಂತೆಯೇ ಫ್ಲಡ್ ವಿಕ್ಟಿಂಸ್ ಅಸೋಸಿಯೇಷನ್ ನೇತೃತ್ವದಲ್ಲಿ ನೆರೆ ಸಂತ್ರಸ್ತರು ಹಾಗೂ ಗ್ರಾಮಸ್ಥರು ಮಂಜೇಶ್ವರ ಗ್ರಾ.ಪಂ. ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ಹಾಗೂ ಅಧ್ಯಕ್ಷೆಗೆ ಘೆರಾವ್ ಹಾಕಿ ತಹಸೀಲ್ದಾರರನ್ನು ಕರೆಸುವಂತೆ ಪಟ್ಟು ಹಿಡಿದರು. ಬಳಿಕ ಸಮಸ್ಯೆ ಇರುವ ಸ್ಥಳಕ್ಕೆ ಕರೆದೊಯ್ದು ಕೂಡಲೇ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net