

ಶಿರಸಿ: ತಾಲೂಕಿನ ತಾರಗೋಡ ಪಂಚಾಯಿತಿ ವ್ಯಾಪ್ತಿಯ ಸದಾಶಿವಳ್ಳಿ ಗ್ರಾಮದ ಸದಾಶಿವ ದೇವಸ್ಥಾನದ ಆವರಣದಲ್ಲಿ ತಾಲೂಕು ಮಟ್ಟದ ಆಕಳ ಹಾಲು ಹಿಂಡುವ ಸ್ಪರ್ಧೆ ಇತ್ತೀಚೆಗೆ ನಡೆಯಿತು.
ಪಶುಸಂಗೋಪನಾ ಇಲಾಖೆ, ಗ್ರಾಮ ಪಂಚಾಯಿತಿ ತಾರಗೋಡ, ಹಾಲು ಉತ್ಪಾದಕರ ಸಹಕಾರಿ ಸಂಘ ತಾರಗೋಡ, ಹುಳಗೋಳ ಸಂಘ ನಿ. ಸಹಕಾರದೊಂದಿಗೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 24ಕ್ಕೂ ಅಧಿಕ ಪಶುಗಳನ್ನು ಕರೆತರಲಾಗಿತ್ತು.
ಇದರಲ್ಲಿ ಎಚ್.ಎಫ್ ತಳಿ ವಿಭಾಗದಲ್ಲಿ ಮಹಾಬಲೇಶ್ವರ ಕೆ. ಹೆಗಡೆ ಗಡಿಕೈ ಇವರ ಆಕಳು (14.85 ಕೆಜಿ) ಹಾಲು ನೀಡುವ ಮೂಲಕ ಮೊದಲ ಸ್ಥಾನ, ಸುರೇಶ ವಿ. ಹೆಗಡೆ ಶೀಗೇಹಳ್ಳಿ ಅವರ ಆಕಳು ಎರಡನೇ ಹಾಗೂ ವಿಶ್ವೇಶ್ವರ ಭಟ್ ಕಣ್ಣೆಹಳ್ಳ ಅವರ ಆಕಳು ಮೂರನೇ ಸ್ಥಾನ ಪಡೆದುಕೊಂಡಿತು.
ಜರ್ಸಿ ವಿಭಾಗದಲ್ಲಿ ಸೀತಾರಾಮ ಹೆಗಡೆ ನೀರ್ನಳ್ಳಿಯವರ ಆಕಳು (17.44 ಕೆ.ಜಿ.) ಮೊದಲ ಸ್ಥಾನ, ಶ್ರೀಕಾಂತ ಎಂ. ಹೆಗಡೆ ಶೀಗೇಹಳ್ಳಿ ಎರಡನೇ ಹಾಗೂ ಡಾ. ಗೋಪಾಲ ವಿ. ಹೆಗಡೆ ಹುಳಗೋಳ ಅವರ ಆಕಳು ಮೂರನೇ ಸ್ಥಾನ ಪಡೆದುಕೊಂಡಿತು. ಮಿಶ್ರತಳಿ ವಿಭಾಗದಲ್ಲಿ ಕುಸುಮಾ ಎನ್. ಹೆಗಡೆ ಬೊಮ್ಮನಳ್ಳಿ ಅವರ ಆಕಳು (20.91 ಕೆ.ಜಿ) ಹಾಲು ಹಿಂಡುವ ಮೂಲಕ ಮೊದಲ ಸ್ಥಾನ, ಸಮತಾ ಎಸ್. ಹೆಗಡೆ ನೀರ್ನಳ್ಳಿ ಅವರ ಆಕಳು ಎರಡನೇ ಹಾಗೂ ಶಂಕರ ಎಸ್. ದೇಶಭಂಡಾರಿ ಅವರ ಆಕಳು ಮೂರನೇ ಸ್ಥಾನ ಪಡೆದುಕೊಂಡಿದೆ.
ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಕಾರ್ಯಕ್ರಮ ಉದ್ಘಾಟಿಸಿದರು. ತಾರಗೋಡ ಗ್ರಾಪಂ ಅಧ್ಯಕ್ಷೆ ಶಾರದಾ ಮುಕ್ತಿ, ಉಪಾಧ್ಯಕ್ಷ ಗಣಪತಿ ಹೆಗಡೆ, ಎಸ್.ಆರ್. ಭಟ್ ನಿಡಗೋಡ, ನಾರಾಯಣ ಹೆಗಡೆ, ಶಾಂತಾರಾಮ ಹೆಗಡೆ, ಪಶು ಸಂಗೋಪನಾ ಇಲಾಖೆಯ ದಿನೇಶ ಕೆ.ಎನ್., ಡಾ. ಜಿ.ವಿ. ಹೆಗಡೆ, ಇತರರಿದ್ದರು.