

ಹುಬ್ಬಳ್ಳಿ : ನಗರದಲ್ಲಿ ಎಲ್ಲೆಂದರಲ್ಲಿ ಕರ್ಕಶ ಶಬ್ಧ ಮಾಡುತ್ತ ತಿರುಗುತ್ತಿದ್ದ ಬೈಕ್ಗಳಿಂದ ವಶಪಡಿಸಿಕೊಂಡಿದ್ದ 200ಕ್ಕೂ ಹೆಚ್ಚು ಸೈಲೆನ್ಸರ್ಗಳನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಸಂಜೆ ರೋಲರ್ ಹಾಯಿಸುವ ಮೂಲಕ ನಾಶಪಡಿಸಿದರು.
ಸಂಚಾರ ನಿಯಮ ಉಲ್ಲಂಘಿಸಿ, ಬೈಕ್ಗಳಿಗೆ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್ಗಳನ್ನು ಅಳವಡಿಸಲಾಗುತ್ತಿದೆ. ಉತ್ತರ, ದಕ್ಷಿಣ ಹಾಗೂ ಪೂರ್ವ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕರ್ಕಶ ಶಬ್ಧ ಉಂಟು ಮಾಡುತ್ತ ಓಡಾಡುತ್ತಿದ್ದ 11 ಲಕ್ಷ ರೂ. ಮೌಲ್ಯದ 200ಕ್ಕೂ ಹೆಚ್ಚು ಬೈಕ್ಗಳ ಸೈಲೆನ್ಸರ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೀಗ ಸಾರ್ವಜನಿಕರ ಎದುರು ನಾಶಪಡಿಸಿ, ಸಂಚಾರ ನಿಯಮ ಉಲ್ಲಂಘಿಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ರಾತ್ರಿ ವೇಳೆ ಹಾಗೂ ಶಾಲಾ-ಕಾಲೇಜುಗಳ ಬಳಿ ಕರ್ಕಶ ಶಬ್ಧ ಮಾಡುತ್ತ ತಿರುವ ಬೈಕ್ಗಳ ಬಗ್ಗೆ ಸಾರ್ವಜನಿಕರು ಪೊಲೀಸರು ದೂರು ನೀಡಿದ್ದರು. ಹುಬ್ಬಳ್ಳಿಯ ಕೇಶ್ವಾಪುರ, ವಿದ್ಯಾನಗರ ಹಾಗೂ ಗೋಕುಲ ರಸ್ತೆಯಲ್ಲಿ ಇಂತಹ ಬೈಕ್ಗಳ ಸಂಚಾರ ಹೆಚ್ಚಾಗಿತ್ತು ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಧಾರವಾಡದಲ್ಲಿಯೂ 150ಕ್ಕೂ ಹೆಚ್ಚು ಸೈಲೆನ್ಸರ್ಗಳನ್ನು ಪೊಲೀಸರು ನಾಶಪಡಿಸಿದ್ದರು.
ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್ ಅಳವಡಿಸಿರುವ ಬೈಕ್ಗಳನ್ನು ವಶಪಡಿಸಿಕೊಳ್ಳುವ ಕಾರ್ಯ ನಿರಂತರವಾಗಿ ಇರಲಿದೆ. ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಇಂತಹ ಸೈಲೆನ್ಸರ್ಗಳನ್ನು ಬೈಕ್ಗಳಿಗೆ ಅಳವಡಿಸದಂತೆ ಗ್ಯಾರೇಜ್ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.