

ಕಾಗವಾಡ: ಪಟ್ಟಣದ ಸುಖಕರ್ತಾ ಸಾರ್ವಜನಿಕ ಗಣೇಶ ಉತ್ಸವ ಮಂಡಳ ಮತ್ತು ಸದ್ಗುರು ಕ್ಲಿನಿಕ್ ನೇತೃತ್ವದಲ್ಲಿ ಮಿರಜನ ನಾಬ್ ನೇತ್ರ ಆಸ್ಪತ್ರೆಯ ಸಹಯೋಗದೊಂದಿಗೆ ಗಣೇಶೋತ್ಸವ ನಿಮಿತ್ತ ಶುಕ್ರವಾರ ಉಚಿತ ನೇತ್ರ ತಪಾಸಣಾ ಶಿಬಿರ ಜರುಗಿತು. 200ಕ್ಕೂ ಅಧಿಕ ಜನರು ಶಿಬಿರದ ಲಾಭ ಪಡೆದರು.
ಗಣೇಶ ಮಂಡಳ ಸದಸ್ಯ ಶಂಕರ ನಾಯಿಕ ಮಾತನಾಡಿ, ಡಾ.ಚಂದ್ರಿಕಾ ವಾಘಮೋಡೆ ನೇತೃತ್ವದಲ್ಲಿ 200ಕ್ಕೂ ಅಧಿಕ ಜನರ ನೇತ್ರ ತಪಾಸಣೆ ಮಾಡಲಾಗಿದೆ. ಅವಶ್ಯ ಇದ್ದವರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದರು.
ಅಶೋಕ ಚನ್ನವೀರ, ಶಂಕರ ನಾಯಿಕ, ಭೀಮು ಕುರಣೆ, ಮಾರುತಿ ಖಾನಾಯಿ, ವಿಕ್ರಂ ಅವಳೇಕರ, ಸಚಿನ ಪಾಟೀಲ, ಜಗದೀಶ ಮಧಬಾವಿಕರ, ಭೀಮರಾವ ಖಾನಾಯಿ, ಸಾಗರ ಸೂರ್ಯವಂಶಿ, ಪಾಂಡುರಂಗ ಖಾನಾಯಿ, ಪಿಂಟು ಮಗದುಮ್, ರಮೇಶ ಇಟ್ನಾಳ, ಸಚಿನ ನಾಯಿಕ, ಮಹೇಶ ಪಾಟೀಲ, ಸತೀಶ ವಾಘಮೋರೆ, ಸುನೀಲ ವಾಘಮೋರೆ, ಸಂಜಯ ಪರೀಟ ಇತರರಿದ್ದರು.131