ರೈಲಿಗೆ ಸಿಲುಕಿ 20ಕ್ಕೂ ಹೆಚ್ಚು ಕುರಿ ಸಾವು

sheep died
Published on

ಸವಣೂರ: ರೈಲಿಗೆ ಸಿಲುಕಿ 20ಕ್ಕೂ ಹೆಚ್ಚು ಕುರಿಗಳು ಮೃತಪಟ್ಟ ಘಟನೆ ಪಟ್ಟಣದ ರೈಲು ನಿಲ್ದಾಣದ ಬಳಿ ಬುಧವಾರ ಸಂಭವಿಸಿದೆ.

ತಾಲೂಕಿನ ಹತ್ತಿಮತ್ತೂರು ತಾಂಡದ ರಮೇಶ ಲಮಾಣಿ ಎಂಬುವರು ಕುರಿ ಮೇಯಿಸಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ.

ರೈಲು ಹಳಿಗುಂಟ ಕುರಿಗಳ ಮೇಯುತ್ತಿದ್ದವು. ಈ ವೇಳೆ ಬೆಂಗಳೂರಿನಿಂದ ಹುಬ್ಬಳ್ಳಿಯತ್ತ ಸಾಗುತ್ತಿದ್ದ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಇಪ್ಪತ್ತಕ್ಕೂ ಹೆಚ್ಚು ಕುರಿಗಳು ಧಾರುಣವಾಗಿ ಸಾವನ್ನಪ್ಪಿವೆ. ಸ್ಥಳಕ್ಕೆ ಪಶುಸಂಗೋಪನೆ ಇಲಾಖೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುರಿ ಕಳೆದುಕೊಂಡ ರಮೇಶ ಲಮಾಣಿಗೆ ಆತ್ಮಸ್ಥೈರ್ಯ ತುಂಬಿ, ಸರ್ಕಾರದಿಂದ ದೊರೆಯುವ ಸೌಲಭ್ಯ ಕೊಡಿಸುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net