20ಕ್ಕೂ ಅಧಿಕ ಮೊಬೈಲ್ ಫೋನ್ ಪತ್ತೆ

HNL-POLICE
Published on

ಹಾನಗಲ್ಲ: ತಾಲೂಕಿನಾದ್ಯಂತ ಜನರು ಕಳೆದುಕೊಂಡಿದ್ದ ಮೊಬೈಲ್‌ಫೋನ್‌ಗಳನ್ನು ಹಾನಗಲ್ಲ ಠಾಣೆ ಪೊಲೀಸರು ಪತ್ತೆ ಹಚ್ಚಿ ಮರಳಿಸಿದ್ದಾರೆ.


ಫೋನ್ ಕಳೆದುಕೊಂಡವರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಮೊಬೈಲ್‌ಫೋನ್ ಎಗರಿಸಿದ ಕಳ್ಳರನ್ನು ಶೋಧಿಸಿ, ಅವರಿಂದ ಫೋನ್‌ಗಳನ್ನು ತರಿಸಿಕೊಂಡು, ಅವುಗಳ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ವಿವಿಧ ಕಂಪನಿಗಳ, ಬೆಲೆಬಾಳುವ 21ಕ್ಕೂ ಅಧಿಕ ಸ್ಮಾರ್ಟ್ ಫೋನ್‌ಗಳನ್ನು ಹಿಂತಿರುಗಿಸಿದ್ದಾರೆ. ಹಿಂದಿರುಗಿಸಿರುವ ಮೊಬೈಲ್‌ಫೋನ್‌ಗಳ ಒಟ್ಟು ಮೌಲ್ಯ 3 ಲಕ್ಷ ರೂಪಾಯಿಗಳೆಂದು ಪೊಲೀಸರು ಅಂದಾಜಿಸಿದ್ದಾರೆ. ಹಾನಗಲ್ಲ ಸಿಪಿಐ ಎಸ್.ಆರ್. ಶ್ರೀಧರ ಅವರ ಮಾರ್ಗದರ್ಶನ ನೀಡಿದ್ದರು.


ಈ ಕುರಿತು ಪ್ರತಿಕ್ರಿಯಿಸಿದ ಪಿಎಸ್‌ಐ ಶರಣಬಸಪ್ಪ ಕಾಂದೆ, ಕಳೆದುಹೋಗಿದ್ದ ಮೊಬೈಲ್‌ಫೋನ್‌ಗಳ ಪತ್ತೆಗಾಗಿ ಪೊಲೀಸ್ ಸಿಬ್ಬಂದಿ ಸಿಇಐಆರ್ ಆ್ಯಪ್ ಬಳಸಿಕೊಳ್ಳಲಾಗಿತ್ತು. ಅಪರಾಧ ಪತ್ತೆ ತಂತ್ರಾಂಶಗಳನ್ನು ಉನ್ನತೀಕರಿಸಿರುವುದರಿಂದ ಅಪರಾಧ ಕೃತ್ಯಗಳನ್ನು ಬೇಗನೆ ಪತ್ತೆ ಮಾಡಲು ಸಾಧ್ಯವಾಗುತ್ತಿದೆ. ಇದಕ್ಕೆ ಪೊಲೀಸರೊಂದಿಗೆ ಸಾರ್ವಜನಿಕರೂ ಕೈಜೋಡಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net