ರೋಟರಿ ಚೆಸ್-೨೦೨೨ ಸ್ಪರ್ಧೆಯಲ್ಲಿ ೧೪೦ಕ್ಕೂ ಹೆಚ್ಚು ಸ್ಪರ್ಧಿ ಭಾಗಿ

MDK02
Published on

ಮಡಿಕೇರಿ: ರೋಟರಿ ಮಡಿಕೇರಿ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆಯೋಜಿಸಿದ್ದ ರೋಟರಿ ಚೆಸ್-೨೦೨೨ ಸ್ಪರ್ಧೆಯಲ್ಲಿ ೧೪೦ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡು ತೀವ್ರ ಪೈಪೋಟಿಯ ಮೂಲಕ ಗಮನ ಸೆಳೆದರು.


೧೦ ವರ್ಷಕ್ಕಿಂತ ಕೆಳಗಿನವರ ವಿಭಾಗದಲ್ಲಿ ಸಾತ್ವಿಕ್ ವಿಶ್ವನಾಥ್(ಪ್ರ), ಅರುಣ್ ಅವನೀಶ್(ದ್ವಿ), ಆರ್.ಶ್ರೇಯಸ್(ತೃ), ಎನ್.ಸನ್‌ಮಯ್ ೪ನೇ ಹಾಗೂ ಕೆ.ಎಸ್.ಚಿನ್‌ಮಿತ್ ೫ ನೇ ಸ್ಥಾನ ಪಡೆದುಕೊಂಡರು. ೧೬ ವರ್ಷಕ್ಕಿಂತ ಕೆಳಗಿನವರ ವಿಭಾಗದಲ್ಲಿ ಎಂ.ಹೆಚ್.ಆಕಾಶ್(ಪ್ರ), ಯಶ್‌ರಾಜ್(ದ್ವಿ), ಎಂ.ಡಿ.ಶಶಾಂಕ್ ನಾಣಯ್ಯ(ತೃ), ಸ್ಪರ್ಶ ರೈ ೪ನೇ ಹಾಗೂ ಪ್ರಧಾನ್ ಮುತ್ತಣ್ಣ ೫ನೇ ಸ್ಥಾನಗಳಿಸಿದರು. ೧೬ ವರ್ಷಕ್ಕಿಂತ ಮೇಲ್ಪಟ್ಟವರ ವಿಭಾಗದಲ್ಲಿ ಕೆ.ಎಂ.ಪ್ರಜ್ವಲ್(ಪ್ರ), ಪಿ.ವಿ.ಶ್ರೀನಿವಾಸ್(ದ್ವಿ), ಎಂ.ಪಿ.ಅಜಿತ್(ತೃ), ರಜತ್ ಗುರುರಾಜ್ ೪ನೇ ಹಾಗೂ ಬಿ.ಎ.ಸುನೀಲ್ ೫ನೇ ಸ್ಥಾನ ಪಡೆದರು.


೧೦ ಹಾಗೂ ೧೬ ವರ್ಷದ ಕೆಳಗಿನ ವಿಭಾಗದ ವಿಜೇತರಿಗೆ ಟ್ರೋಫಿ ನೀಡಲಾಯಿತು. ೧೬ ವರ್ಷ ಮೇಲ್ಪಟ್ಟ ವಿಭಾಗದ ವಿಜೇತರಿಗೆ ಟ್ರೋಫಿ ಹಾಗೂ ರೂ.೭೫೦೦, ೫ಸಾವಿರ, ೩ಸಾವಿರ, ಎರಡೂವರೆ ಸಾವಿರ ಹಾಗೂ ೨ಸಾವಿರದಂತೆ ನಗದು ಬಹುಮಾನ ವಿತರಿಸಲಾಯಿತು.


ರೋಟರಿ ಮಡಿಕೇರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ರೋಟರಿ ಸಂಸ್ಥೆಯ ಉಪ ರಾಜ್ಯಪಾಲ ರತನ್ ತಮ್ಮಯ್ಯ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ನಾಗೇಂದ್ರ ಮುರಳೀಧರ್, ಪ್ರಮುಖರಾದ ಸುರೇಶ್ ಚಂಗಪ್ಪ, ರವಿ ಅಪ್ಪಾಜಿ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ನಿಯಮಗಳನ್ನು ಪಾಲಿಸುವ ಮೂಲಕ ಸ್ಪರ್ಧಾಳುಗಳಿಗೆ ಉತ್ಸಾಹ ತುಂಬಲಾಯಿತು. ಇದೇ ಸಂದರ್ಭ ಎಫ್‌ಐಡಿಇ ತರಬೇತುದಾರ ಹಾಗೂ ಕರ್ನಾಟಕ ಚೆಸ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಕೆ.ವಿ.ಶ್ರೀಪಾದ್ ಅವರಿಂದ ತರಬೇತಿ ಕಾರ್ಯಾಗಾರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net