130ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ

18 tth 01
ಕಟ್ಟೆಹಕ್ಕಲುನಲ್ಲಿ ಗುರುವಾರ ಬಿರುಗಾಳಿಗೆ ವಿದ್ಯುತ್ ಕಂಬ ಮುರಿದು ದ್ವಿಚಕ್ರ ವಾಹನದ ಮೇಲೆ ಬಿದ್ದಿರುವುದು.
Published on

ತೀರ್ಥಹಳ್ಳಿ: ಕಳೆದ ಮೂರ್ನಾಲ್ಕು ದಿನಗಳಿಂದ ಅತಿಯಾಗಿ ಬೀಸಿದ ಗಾಳಿ-ಮಳೆಯಿಂದಾಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೆಲವೆಡೆ ಅಡಕೆ ತೋಟಗಳಿಗೆ ಹಾನಿ ಸಂಭವಿಸಿದೆ. ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೆಲ ಗ್ರಾಮಗಳು ಒಂದೆರಡು ದಿನ ಕತ್ತಲೆಯಲ್ಲೇ ಕಳೆದಿವೆ.

ಪ್ರಮುಖವಾಗಿ ಮಂಡಗದ್ದೆ ಹೋಬಳಿಯ ಜಂಬುವಳ್ಳಿ ಭಾಗದ ತುಂಗಾ ನದಿ ದಡದಲ್ಲಿರುವ ಅಡಕೆ ತೋಟಗಳಿಗೆ ಹೆಚ್ಚು ಹಾನಿ ಉಂಟಾಗಿದೆ. ಪ್ರಭಾಕರ್ ಶೆಟ್ಟಿ ಎಂಬುವರಿಗೆ ಸೇರಿದ ನೂರಾರು ಅಡಕೆ ಮರಗಳು ನೆಲಕ್ಕುರುಳಿವೆ. ಬೆಜ್ಜವಳ್ಳಿ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು 60ಕ್ಕೂ ಹೆಚ್ಚು ಕಂಬಗಳು ನೆಲಕ್ಕುರುಳಿವೆ. ತೀರ್ಥಹಳ್ಳಿ ಮೆಸ್ಕಾಂ ಉಪ ವಿಭಾಗದಲ್ಲೂ ಸುಮಾರು 50 ವಿದ್ಯುತ್ ಕಂಬಗಳು ನೆಕ್ಕುರುಳಿವೆ.
ಮುತ್ತೂರು ಹೋಬಳಿಯ ಹೆದ್ದೂರು, ಹೊಸಳ್ಳಿ ಭಾಗದಲ್ಲಿ ಮತ್ತು ಬುಕ್ಲಾಪುರದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಅದರಲ್ಲೂ ಮುಖ್ಯವಾಗಿ ಹೊನ್ನಂಗಿ, ನೇರಲಮನೆ ಶಾಂತಿಕೆರೆ ಭಾಗದಲ್ಲಿ ಬೀಸಿದ ಬಿರುಗಾಳಿಗೆ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಉಳಿದಂತೆ ಕೆಳಕೆರೆ ಹೊರಬೈಲು, ಕಟ್ಟೇಹಕ್ಕಲು, ಹೊಳೆಕೊಪ್ಪ, ಕೂಳೂರು ಭಾಗದಲ್ಲಿ ಬೀಸಿದ ಬಿರುಗಾಳಿಗೆ ಕೂಳೂರು ನಾಗರಾಜ್ ಎಂಬುವವರ ಮನೆಯ ಮಾಡಿಗೆ ವಿದ್ಯುತ್ ತಂತಿ ಬಿದ್ದು ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net