120ಕ್ಕೂ ಹೆಚ್ಚು ಅಡಕೆ ಮರಗಳಿಗೆ ಕೊಡಲಿ Areca Tree

ಸಿದ್ದಾಪುರ ತಾಲೂಕಿನ ಗೋಳಿಕೈನಲ್ಲಿ ಅರಣ್ಯ ಇಲಾಖೆಯವರು ಕಡಿದು ಹಾಕಿದ ಅಡಕೆ ಮರಗಳ (Areca Tree) ತುಂಡು ಹಾಗೂ ಅಡಕೆ ಕೊನೆ.
ಸಿದ್ದಾಪುರ ತಾಲೂಕಿನ ಗೋಳಿಕೈನಲ್ಲಿ ಅರಣ್ಯ ಇಲಾಖೆಯವರು ಕಡಿದು ಹಾಕಿದ ಅಡಕೆ ಮರಗಳ (Areca Tree) ತುಂಡು ಹಾಗೂ ಅಡಕೆ ಕೊನೆ.
Published on
ಸಿದ್ದಾಪುರ: ತಾಲೂಕಿನ ಗೋಳಿಕೈನಲ್ಲಿ ಅರಣ್ಯ ಇಲಾಖೆ ದಿಢೀರ್ ಕಾರ್ಯಾಚರಣೆ ನಡೆಸಿ ರೈತರೊಬ್ಬರು 1980ಕ್ಕಿಂತ ಮೊದಲಿನಿಂದಲೂ ಸಾಗುವಳಿ ಮಾಡುತಿದ್ದ ಅತಿಕ್ರಮಣ ಜಾಗದಲ್ಲಿನ ನೂರಾರು ಅಡಿಕೆ ಮರಗಳನ್ನು
( Areca Tree) ಧರೆಗುರುಳಿಸಿದ ಘಟನೆ ಮಂಗಳವಾರ ನಡೆದಿದೆ.
ಬಿಳಗಿ ಗ್ರಾಪಂ ವ್ಯಾಪ್ತಿಯ ಕ್ಯಾದಗಿ ಅರಣ್ಯ ವಲಯದ ಗೊಳಿಕೈನ ಗಣೇಶ ವೆಂಕಟ್ರಮಣ ಹೆಗಡೆ ಎನ್ನುವವರಿಗೆ ಸೇರಿದ ತೋಟದಲ್ಲಿ ಅರಣ್ಯ ಇಲಾಖೆ ಈ ತೆರವು ಕಾರ್ಯಾಚರಣೆ ನಡೆಸಿದೆ.
ಸುಮಾರು 20 ರಿಂದ 25 ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮರ ಕಡಿಯುವ ಕಾರ್ಮಿಕರು ಏಕಾಏಕಿ ಆಗಮಿಸಿ, ಫಲ ನೀಡುತ್ತಿದ್ದ ಸುಮಾರು 120ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕತ್ತರಿಸಿ ಹಾಕಿದ್ದಾರೆ.
ಕಳೆದ ಮೂರೂವರೆ ದಶಕಗಳಿಂದ ಅತ್ಯಂತ ಕಷ್ಟಪಟ್ಟು ಬೆಳೆಸಿದ್ದ, ಫಸಲು ನೀಡುತ್ತಿದ್ದ ಮರಗಳನ್ನು ಕಣ್ಣೆದುರೇ ಕಡಿದು ಹಾಕಿರುವುದು ರೈತ ಕುಟುಂಬವನ್ನು ಕಂಗಾಲಾಗಿಸಿದೆ.
ಈ ಹಿಂದೆ ಅತಿಕ್ರಮಣ ತೆರವು ಗೊಳಿಸುವಂತೆ ನೋಟಿಸ್ ಕೂಡ ನೀಡಲಾಗಿತ್ತು. ಅರಣ್ಯ ಭೂಮಿ ಅತಿಕ್ರಮಣ ತೆರವು ಹೆಸರಿನಲ್ಲಿ ನಡೆದಿರುವ ಈ ಕಾರ್ಯಾಚರಣೆ ಬಗ್ಗೆ ಸ್ಥಳೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಘಟನಾ ಸ್ಥಳದಲ್ಲಿ ಕಡಿದ ಅಡಿಕೆ ಮರಗಳನ್ನು ಕತ್ತರಿಸಿ ಗುಪ್ಪೆ ಹಾಕಿದ್ದು,ಅಡಿಕೆ ಕೊನೆಗಳನ್ನು ಸ್ಥಳದಲ್ಲೇ ಇಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net