ಹೆಚ್ಚು ಅಂಕ ಗಳಿಕೆಗೆ ಟ್ಯೂಷನ್ ಪೂರಕ

9
ಹಾರುಗೂಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಟ್ಯೂಷನ್ ಕ್ಲಾಸ್ ಉದ್ಘಾಟನೆ ಸಮಾರಂಭಕ್ಕೆ ಮುಖ್ಯೋಪಾಧ್ಯಾಯ ಎಸ್. ವಿ. ಯರಡ್ಡಿ ಚಾಲನೆ ನೀಡಿದರು. ಲವಕುಮಾರ ಎಚ್., ಮಂಜುಳಾ ದಂಡಪ್ಪನವರ, ಸತೀಶ ಡಿ., ಅನ್ನಪೂರ್ಣಾ ಕಂಬಾರ ಇತರರಿದ್ದರು.
Published on

ಮುರಗೋಡ: ಶಿಕ್ಷಣ ಪಡೆಯುವುದಲ್ಲದೆ ಕೆಲ ವಿಷಯಗಳ ಬಗ್ಗೆ ಟ್ಯೂಷನ್ ಪಡೆಯುವುದು ಹೆಚ್ಚಿನ ಅಂಕ ಗಳಿಸಲು ಸಹಾಯಕ ಎಂದು ಹಾರುಗೂಪ್ಪ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ವಿ.ಯರಡ್ಡಿ ಹೇಳಿದರು.

ಸಮೀಪದ ಹಾರುಗೂಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಯರಗಟ್ಟಿ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಉಚಿತ ಟ್ಯೂಷನ್ ಕ್ಲಾಸ್ ಈಚೆಗೆ ಉದ್ಘಾಟಿಸಿ ಮಾತನಾಡಿದರು.

ಗೋಕಾಕ ಜಿಲ್ಲಾ ನಿರ್ದೇಶಕ ಲವಕುಮಾರ ಎಚ್.ಮಾತನಾಡಿ, ಉಚಿತ ಟ್ಯೂಷನ್ ಕ್ಲಾಸ್ ಸದುಪಯೋಗ ಪಡೆದುಕೊಂಡು ಹೆಚ್ಚಿನ ಅಂಕ ಗಳಿಸಬೇಕು ಎಂದರು. ಯರಗಟ್ಟಿ ಯೋಜನಾಧಿಕಾರಿ ಸತೀಶ ಡಿ., ವಲಯ ಮೇಲ್ವಿಚಾರಕಿ ಮಂಜುಳಾ ದಂಡಪ್ಪನವರ, ಅನ್ನಪೂರ್ಣಾ ಕಂಬಾರ ಇತರರಿದ್ಧರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net