ಗುಣಮಟ್ಟ ಸುಧಾರಣೆಯಿಂದ ಹೆಚ್ಚು ಲಾಭ

ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮವನ್ನು ಎಡಿಪಿಆರ್ ಅಪರಂಜಿ ಉದ್ಘಾಟಿಸಿದರು. ಪ್ರಮುಖರಾದ ಎನ್.ಪಾರ್ವತಿ, ವಿನೋದಕುಮಾರ್, ಅಶ್ವಿನಿ, ಅಕ್ಕನಾಗಮ್ಮ ಇತರರಿದ್ದರು.
ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮವನ್ನು ಎಡಿಪಿಆರ್ ಅಪರಂಜಿ ಉದ್ಘಾಟಿಸಿದರು. ಪ್ರಮುಖರಾದ ಎನ್.ಪಾರ್ವತಿ, ವಿನೋದಕುಮಾರ್, ಅಶ್ವಿನಿ, ಅಕ್ಕನಾಗಮ್ಮ ಇತರರಿದ್ದರು.
Published on

ಕಂಪ್ಲಿ: ಕೌಶಲ ತರಬೇತಿಯಿಂದ ಉತ್ಪಾದನಾ ಗುಣಮಟ್ಟ ಸುಧಾರಿಸಲು ಸಾಧ್ಯ ಎಂದು ಸಿಡಾಕ್ ಸಂಸ್ಥೆಯ ತರಬೇತುದಾರ ವಿನೋದ ಕುಮಾರ್‌ಹೇಳಿದರು.

ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಬಳ್ಳಾರಿಯ ಗ್ರಾಮೀಣ ಕೈಗಾರಿಕೆ, ಕರ್ನಾಟಕ ಉದ್ಯಮಶೀಲ ಅಭಿವೃದ್ಧಿ ಕೇಂದ್ರ (ಸಿಡಾಕ್), ಜಿಪಂ, ತಾಪಂ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉದ್ಯಮ ಶೀಲತಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರು ಈಗಾಗಲೇ ತೊಡಗಿಸಿಕೊಂಡ ಉದ್ಯಮದಲ್ಲೇ ಇನ್ನಷ್ಟು ಕೌಶಲದಿಂದ ಉತ್ಪಾದನೆ ಗುಣಮಟ್ಟದ ಸುಧಾರಣೆ ಜತೆ ಹೆಚ್ಚು ಲಾಭಗಳಿಸಬಹುದು ಎಂದರು. ತರಬೇತಿಯಲ್ಲಿ ಮಾರುಕಟ್ಟೆ ಕೌಶಲ, ಗುಣಮಟ್ಟ ಕಾಯ್ದುಕೊಳ್ಳುವಿಕೆ ಹಾಗೂ ಉದ್ಯಮಶೀಲತೆ ಕುರಿತು ಸಮಗ್ರ ಮಾಹಿತಿ ನೀಡಿದರು.

ಎಡಿಪಿಆರ್ ಅಪರಂಜಿ, ಎನ್‌ಆರ್‌ಎಲ್‌ಎಂ ತಾಲೂಕು ಸಂಪನ್ಮೂಲ ವ್ಯಕ್ತಿ ಪಾರ್ವತಿ, ಬಿಆರ್‌ಪಿ ಅಶ್ವಿನಿ, ವಿಷಯ ನಿರ್ವಾಹಕಿ ಅಕ್ಕನಾಗಮ್ಮ, ಸ್ತ್ರೀ ಸಾಮರ್ಥ್ಯ ಯೋಜನೆ ಪಲಾನುಭವಿಗಳು, ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net