ಹೆಚ್ಚಿನ ಲಾಭ ಕೊಡುವುದಾಗಿ 9.55 ಲಕ್ಷ ರೂ. ವಂಚನೆ

Cibra
Published on

ರಾಣೆಬೆನ್ನೂರ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 9.55 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿಯ ಕೋಟೆ ಓಣಿಯ ಅಭಿಷೇಕ ರುದ್ರಗೌಡ ಪಾಟೀಲ (30) ಎಂಬುವರಿಗೆ ಮೋಸ ಮಾಡಿರುವುದು.

ಇವರಿಗೆ ಬಾರ್ಕ್​ ಲೇಜ್​ ಪ್ರೆೈಮರಿ ಎಂಬ ಖಾತೆ ತೆರೆಯಲು ಅಪರಿಚಿತ ವ್ಯಕ್ತಿಗಳು ಹೇಳಿದ್ದು, ಅದರ ಮೂಲಕ ಷೇರು ಮಾರುಕಟ್ಟೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಕೊಡುವುದಾಗಿ ನಂಬಿಸಿದ್ದಾರೆ. ಅದರಂತೆ ಅಭಿಷೇಕ ಹಂತ ಹಂತವಾಗಿ ಒಟ್ಟು 9.55 ಲಕ್ಷ ರೂ. ಹಾಕಿದ್ದಾರೆ. ಆದರೆ, ವಾಪಸ್​ ಲಾಭಾಂಶ ಹಾಗೂ ಮೂಲ ಹಣ ಕೂಡ ನೀಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net