

ರಾಣೆಬೆನ್ನೂರ: ನಮ್ಮ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚನ ಲಾಭ ಕೊಡಲಾಗುವುದು ಎಂದು ನಂಬಿಸಿ ಇಲ್ಲಿಯ ಸೀಡ್ಸ್ ಕಂಪನಿಯ ನಿವೃತ್ತ ಉದ್ಯೋಗಿಯೊಬ್ಬರಿಗೆ ಬರೋಬ್ಬರಿಗೆ 26.33 ಲಕ್ಷ ರೂ. ವಂಚಿಸಿದ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿಯ ವಿನಾಯಕ ನಗರದ ಮಂಜುನಾಥ ನಾರಾಯಣ ಹೆಗಡೆ (58) ಎಂಬುವರಿಗೆ ಮೋಸ ಮಾಡಿರುವುದು.
ಇವರ ವಾಟ್ಸ್ಅಪ್ ನಂಬರ್ಗೆ ಸ್ಯಾಮಕೋ ಸೆಕ್ಯೂರಿಟಿ ಇಕ್ವಿನಾಕ್ಸ್ ಬಿಸಿಸೆನ್ ಎಂಬ ಕಂಪನಿಯವರು ಮೇಸೆಜ್ ಕಳುಹಿಸಿ ನಮ್ಮಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡಲಾಗುವುದು ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಮಂಜುನಾಥ ಅವರು ಹಂತ ಹಂತವಾಗಿ ಒಟ್ಟು 26.33 ಲಕ್ಷ ರೂ. ಹಾಕಿದ್ದಾರೆ. ಇದರ ಲಾಭಾಂಶ 1.56 ಕೋಟಿ ರೂ. ಬರಲಿದೆ ಎಂದು ತಿಳಿಸಿದ್ದ ಕಂಪನಿಯವರು ಲಾಭಾಂಶ ನೀಡದೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.