

ಹಾವೇರಿ: ಎಂಎಚ್ಐಪಿಒಬಿ ಸ್ಪಾರ್ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಶೇ. 20ರಷ್ಟು ಲಾಭ ಕೊಡುವುದಾಗಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 49 ಲಕ್ಷ ರೂ. ತೆಗೆದುಕೊಂಡು ವಂಚಿಸಿದ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಹಿರೇಕೆರೂರ ಪಟ್ಟಣದ ಅಮರನಾಥ ಓಂಕಾರಪ್ಪ ಕುಂಕಮಗಾರ (33) ವಂಚನೆಗೊಳಗಾದವರು.
ಇವರಿಗೆ ಎಂಎಚ್ಐಪಿಒಬಿ ಸ್ಪಾರ್ ಕಂಪನಿ ಮ್ಯಾನೇಜರ್ ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಶೇ. 20ರಷ್ಟು ಲಾಭ ನೀಡಲಾಗುವುದು ಎಂದು ನಂಬಿಸಿದ್ದಾನೆ. ಅಲ್ಲದೆ ಅಮರನಾಥ ಅವರ ವಿವಿಧ ಖಾತೆಗಳಿಂದ 49.77 ಲಕ್ಷ ರೂ. ಹಾಕಿಸಿಕೊಂಡು ವಂಚಿಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.