

ಹಾವೇರಿ: ಯುವತಿಯೊಬ್ಬಳು ಟೆಲಿಗ್ರಾಂನಲ್ಲಿ ಇಲ್ಲಿಯ ವ್ಯಕ್ತಿಯೊಬ್ಬನಿಗೆ ಮೇಸೆಜ್ ಮಾಡಿ ಕಂಪನಿಯೊಂದರ ಹೆಸರಿನಲ್ಲಿ 32 ಸಾವಿರ ರೂ. ಲಾಭ ಕೊಟ್ಟು 15.28 ಲಕ್ಷ ರೂ. ವಂಚಿಸಿದ ಘಟನೆ ಕುರಿತು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.
ಇಲ್ಲಿಯ ವಿದ್ಯಾ ನಗರದ ನವೀನ ಜಗದೀಶಪ್ಪ ಕೊಪ್ಪದ (37) ಮೋಸ ಹೋದವರು.
ಇವರಿಗೆ ಅಂಜಲಿ ಎಂಬವರು ಟೆಲಿಗ್ರಾಂನಲ್ಲಿ ಚಾಟ್ ಮಾಡಿ ಯುಮಾ ಬ್ರಾೃಂಡ್ ಟ್ರೇಡಿಂಗ್ ಕಂಪನಿಯಲ್ಲಿ ಪೂಡ್ ರೇಟಿಂಗ್ ಇರುತ್ತದೆ. ಪ್ರತಿ ರೇಟಿಂಗ್‌ಗೆ 150ರಿಂದ 200 ರೂ. ಕಮಿಷನ್ ಗಳಿಸಬಹುದು ಎಂದು ನಂಬಿಕೆ ಹುಟ್ಟಿಸಿದ್ದಾಳೆ. ಅಲ್ಲದೆ ಇವರು ಹಾಕಿದ ಹಣಕ್ಕೆ ಪ್ರತಿಯಾಗಿ 32 ಸಾವಿರ ರೂ. ಮೊದಲಿಗೆ ಖಾತೆಗೆ ಹಾಕಿ ವಿಥ್ ಡ್ರಾ ಮಾಡಿಕೊಳ್ಳುವಂತೆ ಹೇಳಿ ವಿಶ್ವಾಸಗಳಿಸಿದ್ದಾಳೆ. ನಂತರ ನವೀನ ಕಡೆಯಿಂದ ಬರೋಬ್ಬರಿ 15.28 ಲಕ್ಷ ರೂ. ಹಾಕಿಸಿಕೊಂಡು ಮೋಸ ಮಾಡಿದ್ದಾಳೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.