ಕೌಶಲಾಧಾರಿತ ಶಿಕ್ಷಣದತ್ತ ಹೆಚ್ಚು ಆದ್ಯತೆ

kon
Published on

ಕೊಕ್ಕರ್ಣೆ: ವಿದ್ಯಾರ್ಥಿಗಳು ಅಂಕಗಳಿಕೆ ಜತೆ ಮೌಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕು. ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ವರ್ಕ್ ಮುಖ್ಯ. ಕೌಶಲಾಭಿವೃದ್ಧಿ ಶಿಕ್ಷಣ ಮುಖ್ಯವಾಗಿದ್ದು, ಪಾಲಕರು, ಶಿಕ್ಷಕರು ಇದರತ್ತ ಗಮನ ಹರಿಸಬೇಕು ಎಂದು ರಂಗಕರ್ಮಿ ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ಹೇಳಿದರು.

ಸಾಸ್ತಾವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜರುಗಿದ ಬೇಸಿಗೆ ಶಿಬಿರ ಚಿತ್ತಾರ ಇದು ಪ್ರತಿಭೆಯ ವಿಸ್ತಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿ.ಎಸ್.ರಾಮ್ ಶೆಟ್ಟಿ ಹಾರಾಡಿ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಣ ಇಲಾಖೆಯ ಬಿಆರ್‌ಪಿ ಉದಯ್ ಕೋಟ, ಕೊಕ್ಕರ್ಣೆ ಕ್ಲಸ್ಟರ್ ಸಿಆರ್‌ಪಿ ಪ್ರತಿಭಾ, ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ ರಮೇಶ್ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ನಾಯ್ಕ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಹರಿಮಕ್ಕಿ, ಪಾಲಕರು ಮತ್ತಿತರರಿದ್ದರು. ಮುಖ್ಯಶಿಕ್ಷಕಿ ವನಿತಾ ಶೆಟ್ಟಿ ಸ್ವಾಗತಿಸಿದರು. ಸುಜಾತಾ ನಿರೂಪಿಸಿದರು. ಸುಶ್ಮಾ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net