

ಕುಮಟಾ: ಮತಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಮುಂದೆಯೂ ಇನ್ನೂ ಹೆಚ್ಚಿನ ಕೆಲಸ ನಿರ್ವಹಿಸಲಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪಟ್ಟಣದ ನೆಲ್ಲಿಕೇರಿಯ ಮಹಾಸತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಾಂಶುಪಾಲ ಸತೀಶ ಬಿ. ನಾಯ್ಕ, ಕೆನರಾ ಎಕ್ಸಲೆನ್ಸ್ ಕಾಲೇಜ್ನ ಪ್ರಾಂಶುಪಾಲ ಡಿ.ಎನ್. ಭಟ್, ಉಪನ್ಯಾಸಕ ಆರ್.ಎಚ್. ನಾಯ್ಕ, ಎಸ್.ಎಂ. ನಾಯ್ಕ, ಎನ್ನೆಸ್ಸೆಸ್ಸ್ ಮುಖ್ಯಸ್ಥ ರಾಘವೇಂದ್ರ ಮಡಿವಾಳ, ಕ್ರೀಡಾ ವಿಭಾಗದ ಮುಖ್ಯಸ್ಥ ನಾಗರಾಜ, ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪಾಧ್ಯಕ್ಷ ನಿತ್ಯಾನಂದ ನಾಯಕ, ಪುರಸಭಾ ಸದಸ್ಯೆ ಮೋಹಿನಿ ಗೌಡ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರತೀಕ್ ಮತ್ತು ಶರದಿ ವೇದಿಕೆಯಲ್ಲಿದ್ದರು. ಕಾಲೇಜ್ನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.