

ಹಾವೇರಿ: ಆನ್ಲೈನ್ ರಿಯಲ್ ಎಸ್ಟೇಟ್ ಎಕ್ಸ್ಪೋಜರ್ಗೆ ಮತ್ತು ಲಕ್ಸರಿ ಎಕ್ಸ್ಪೋಜರ್ಗೆ ಹಣ ಹಾಕಿದರೆ ನಿಮಗೆ ಹೆಚ್ಚಿನ ಹಣ ಹಾಕುತ್ತೇವೆ ಎಂದು ನಂಬಿಸಿ ಮಹಿಳೆಯೊಬ್ಬರಿಗೆ 13.42 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಹಿರೇಕೆರೂರ ತಾಲೂಕಿನ ಹಂಸಬಾವಿಯ ಮಧು (30) ಎಂಬುವರಿಗೆ ವಂಚಿಸಿರುವುದು.
ಇವರ ವಾಟ್ಸಅಪ್ಗೆ ಅಪರಿಚಿತ ವ್ಯಕ್ತಿ ಆನ್ಲೈನ್ ರಿಯಲ್ ಎಸ್ಟೇಟ್ ಎಕ್ಸ್ಪೋಜರ್ಗೆ ಮತ್ತು ಲಕ್ಸರಿ ಎಕ್ಸ್ಪೋಜರ್ಗೆ ಹಣ ಹಾಕಿದರೆ ನಿಮಗೆ ಹೆಚ್ಚಿನ ಹಣ ಹಾಕುತ್ತೇವೆ ಎಂದು ಮೇಸೆಜ್ ಕಳುಹಿಸಿ ನಂಬಿಸಿದ್ದಾನೆ. ಇದನ್ನು ನಂಬಿದ ಮಧು ತಮ್ಮ ವಿವಿಧ ಖಾತೆಯಿಂದ 13.42 ಲಕ್ಷ ರೂ. ಹಾಕಿದ್ದಾರೆ. ಆದರೆ, ಮರಳಿ ಯಾವುದೆ ಹಣ ಬರದಿದ್ದಾಗ ಮೋಸ ಹೋಗಿರುವುದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂ ಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.