ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ

1sri-`1
Published on

ಶೃಂಗೇರಿ: ವಿದ್ಯಾರ್ಥಿಗಳು ಪಠ್ಯ ಪುಸ್ತಕದೊಂದಿಗೆ ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನ ದೊರಕುತ್ತದೆ ಎಂದು ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾಮರಿಯಪ್ಪ ನಾಯ್ಕ ಹೇಳಿದರು.

ಮೆಣಸೆ ಗ್ರಂಥಾಲಯದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿ ಸಂವಿಧಾನ ಪೀಠಿಕೆಯನ್ನು ವಿದ್ಯಾರ್ಥಿಗಳಿಗೆ ಹೇಳುವ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕ ಓದುವುದಕ್ಕೆ ಹೆಚ್ಚು ಗಮನ ನೀಡಬೇಕು. ಇದರೊಂದಿಗೆ ಗ್ರಂಥಾಲಯದಲ್ಲಿ ಶ್ರೇಷ್ಠ ಸಾಹಿತಿಗಳ ಪುಸ್ತಕ, ಮಕ್ಕಳ ಕಥೆಗಳು, ದಿನ ಪತ್ರಿಕೆಗಳು ಲಭ್ಯವಿರುತ್ತದೆ. ಕನಿಷ್ಟ ವಾರಕೊಮ್ಮೆಯಾದರೂ ಗ್ರಂಥಾಲಯಕ್ಕೆ ಭೇಟಿ, ನೀಡಿ ಪುಸ್ತಕ ಓದಬೇಕು ಎಂದರು.

ಗ್ರಾಪಂ ಸದಸ್ಯ ತ್ರಿಮೂರ್ತಿ ಮಾತನಾಡಿ, ದಿನ ಪತ್ರಿಕೆ ಓದುವುದರಿಂದ ಅಂದಿನ ದೇಶ, ವಿದೇಶದ ಹಾಗೂ ಸ್ಥಳೀಯ ವಿಚಾರ ತಿಳಿಯುತ್ತದೆ. ದಿನ ಪತ್ರಿಕೆ ಓದುವುದರಿಂದ ಸಾಮಾನ್ಯ ಜ್ಞಾನ ದೊರಕುತ್ತದೆ. ಸಂವಿಧಾನ ಪೀಠಿಕೆಯನ್ನು ಶಾಲಾ ಮಕ್ಕಳು ಕಂಠಪಾಠ ಮಾಡಿ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಉತ್ತಮವಾಗಿ ಹೇಳಿರುವ ವಿದ್ಯಾರ್ಥಿಗಳಿಗೆ ಬಹುಮನ ನೀಡಲಾಗುತ್ತದೆ ಎಂದರು.

ಮೆಣಸೆ, ಮಸಿಗೆ, ಕಲ್ಕಟ್ಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗ್ರಂಥಪಾಲಕ ಶ್ರೀ ನಿವಾಸ್, ಗ್ರಾಪಂ ಸದಸ್ಯರಾದ ಸುಷ್ಮಾ ಸುರೇಂದ್ರ, ಮಂಜುನಾಥ್, ರವೀಂದ್ರ, ರಾಮಕೃಷ್ಣ , ಮಸಿಗೆ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ರಾಜೇಶ್, ಶಿಕ್ಷಕರಾದ ನವೀನ್, ಮಮತಾ, ಶಿಲ್ಪಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net