ಪ್ರಾಯೋಗಿಕ ತರಬೇತಿಯಿಂದ ಹೆಚ್ಚಿನ ಉದ್ಯೋಗಾವಕಾಶ

15Anand7
Published on

ಬೆಳಗಾವಿ: ವಿದ್ಯಾರ್ಥಿಗಳು ಪಡೆದ ಶಿಕ್ಷಣ ಮತ್ತು ಮುಂದೆ ಪಡೆಯಲಿರುವ ಉದ್ಯೋಗದ ಸೇತುವೆಯಾಗಿ ಇಂರ್ಟನ್​ಶಿಪ್​ ಇರಲಿದೆ. ಇದರಲ್ಲಿ ಸರಿಯಾದ ಪ್ರಾಯೋಗಿಕ ತರಬೇತಿ ಪಡೆದವರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾಮಂಡಳ ವಿಭಾಗದ ವಿಶೇಷಾಧಿಕಾರಿ ಪ್ರೊ.ಬಿ.ಎಸ್​.ನಾವಿ ಅಭಿಪ್ರಾಯಪಟ್ಟರು.

ನಗರದ ಕೆಎಲ್​ಎಸ್​ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಪ್ರಧಾನಮಂತ್ರಿ ಉಷಾ(ಮೇರು) ಸಾಪ್ಟ್​ ಕಂಪೋನೆಂಟ್​ರ ಅಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಇಂರ್ಟನ್​ಶಿಪ್​ ಆಧಾರಿತ ಪದವಿ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ವೃತ್ತಿ ಪೂರ್ವ ತರಬೇತಿ ಪಡೆದುಕೊಳ್ಳಬೇಕು. ಇದು ಆತ್ಮವಿಶ್ವಾಸ ಮತ್ತು ಕಾರ್ಯಮತೆ ಹೆಚ್ಚಿಸುತ್ತದೆ. ಇಲ್ಲಿ ಪಡೆದ ಅನುಭವದಿಂದ ವೃತ್ತಿಯಲ್ಲಿ ವಿಶೇಷ ನಾವಿನ್ಯತೆ ತರಲು ಸಹಾಯವಾಗುತ್ತದೆ ಎಂದರು.

ಪ್ರಾಚಾರ್ಯ ಡಾ.ವೇಣುಗೋಪಾಲ ಜಾಲಿಹಾಳ ಇಂರ್ಟನ್​ಶಿಪ್​ನಲ್ಲಿ ದೊರೆಯುವ ಪ್ರಾಯೋಗಿಕ ಅನುಭವ ಮತ್ತು ಕೌಶಲಗಳು ಹೆಚ್ಚಿನ ಉದ್ಯೋಗಾವಕಾಶಗಳ ಕುರಿತು ತಿಳಿಸಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿರ್ವಹಣಾ ವಿಭಾಗದ ಪ್ರೊ.ಬಸವರಾಜ ಕುಡಚಿಮಠ, ಡಾ.ಶಶಿಕಲಾ ಜವಳಕರ, ವಾಣಿಜ್ಯ ವಿಭಾಗದ ನಯನಾ ರಾಯಚೂರ, ಸಹಾಯಕ ಕುಲಸಚಿವೆ ಡಾ.ರಶ್ಮಿ ಪೈ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net