ಉಳಿತಾಯದ ಹಣಕ್ಕೆ ಹೆಚ್ಚಿನ ಮಹತ್ವ

16 rbk-2
ಪುಸ್ತಕಾವಲೋಕನ-31ರ ಕಾರ್ಯಕ್ರಮದಲ್ಲಿ ರಬಕವಿಯ ಹಿರಿಯ ಸಾಹಿತಿ ಮೃತ್ಯುಂಜಯ ರಾಮದುರ್ಗ ಅವರು ಮಹಿಳೆ ಮತ್ತು ಉಳಿತಾಯ ಕೃತಿ ಅವಲೋಕಿಸಿದರು. ಸುರೇಶ ಶಂಕರೆಪ್ಪ ಪಟ್ಟಣಶೆಟ್ಟಿ, ಮಲ್ಲೇಶಪ್ಪ ಕುಚನೂರ, ಸಿದ್ದಣ್ಣ ಉತ್ನಾಳ, ಮ.ಕೃ. ಮೇಗಾಡಿ ಇದ್ದರು.
Published on

ರಬಕವಿ/ಬನಹಟ್ಟಿ: ಉಳಿತಾಯಕ್ಕೆ ಮಿತವ್ಯಯ ಅತ್ಯಗತ್ಯ. ದುಡಿದ ಹಣದಲ್ಲಿ ಒಂದಿಷ್ಟು ತೆಗೆದಿರಿಸಬೇಕು. ಉಳಿತಾಯ ಮಾಡಿದ ಹಣಕ್ಕೆ ಹೆಚ್ಚಿನ ಮಹತ್ವ ಇರುತ್ತದೆ ಎಂದು ರಬಕವಿಯ ಹಿರಿಯ ಸಾಹಿತಿ ಮೃತ್ಯುಂಜಯ ರಾಮದುರ್ಗ ಹೇಳಿದರು.

ಭಾನುವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಬನಹಟ್ಟಿ ತಾಲೂಕು ಘಟಕ, ವಲಯ ಘಟಕ ತೇರದಾಳ, ಮಹಾಲಿಂಗಪುರ ಸಂಯುಕ್ತಾಶ್ರಯದಲ್ಲಿ ರಬಕವಿ ಬಸವನಗರ 11ನೇ ಕ್ರಾಸ್‌ನಲ್ಲಿರುವ ಸುರೇಶ ಶಂ. ಪಟ್ಟಣಶೆಟ್ಟಿ ಇಂಜಿನಿಯರ್ ಅವರ ನಿವಾಸದಲ್ಲಿ ನಡೆದ ಪುಸ್ತಕಾವಲೋಕನ-31ರ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಲೀಲಾದೇವಿ ಆರ್. ಪ್ರಸಾದ್ ಅವರ ಮಹಿಳೆ ಮತ್ತು ಉಳಿತಾಯ ಕೃತಿ ಅವಲೋಕಿಸಿ ಅವರು ಮಾತನಾಡಿದರು.

ಮಿತವ್ಯಯದಿಂದ ಹಣದ ಉಳಿತಾಯ, ಉಳಿತಾಯದಿಂದ ದೇಶಕ್ಕೂ ಲಾಭ ನಿಶ್ಚಿತ. ಉಳಿತಾಯ ಮನೆಯಿಂದಲೇ ಪ್ರಾರಂಭವಾಗಬೇಕು. ಇದಕ್ಕೆ ಪ್ರೇರಕ ಶಕ್ತಿ ಮಹಿಳೆಯರು ಎಂಬುವುದರಲ್ಲಿ ಎರಡು ಮಾತಿಲ್ಲ. ಆಧುನಿಕ ಕಾಲದ ಮಹಿಳೆಯರು ವಿಲಾಸಿ ವೈಭವಗಳಿಂದ ದೂರವಿದ್ದು ಕುಟುಂಬದ ಕಲ್ಯಾಣಕ್ಕಾಗಿ ಉಳಿತಾಯ ಮಾಡುವುದು ಒಳಿತು. ಗೃಹಿಣಿಯು ಮನಸ್ಸು ಮಾಡಿದರೆ ಉಳಿತಾಯ ಮಾಡುತ್ತ ಮನೆಯನ್ನು ನಂದಗೋಕುಲ ಮಾಡಲು ಸಾಧ್ಯ ಎಂದರು.

ಹಿರಿಯ ಸಾಹಿತಿ ಸಿದ್ದರಾಜ ಪೂಜಾರಿ ಮಾತನಾಡಿ, ಜಗತ್ತಿನ ಸಂಸ್ಕೃತಿಯ ತೇರು ಎಳೆದವರು ಮಹಿಳೆಯರು. ತುಳಿತಕ್ಕೊಳ್ಳಗಾದವರು ಮಹಿಳೆಯರು. ಪುಸ್ತಕಾವಲೋಕನ ಓದುಗರನ್ನು ಸಿದ್ಧಗೊಳಿಸುವ ಗಮನಾರ್ಹ ಕಾರ್ಯಕ್ರಮವಾಗಿದೆ. ಇಲ್ಲಿ ವೈಜ್ಞಾನಿಕ ಚರ್ಚೆಗಳಾಗಲಿ ಎಂದರು.

ಮಹಾಶಾಂತ ಶೆಟ್ಟಿ ಮಾತನಾಡಿ, ಮಹಿಳೆಯರಷ್ಟೇ ಅಲ್ಲ, ಪುರುಷರು ಉಳಿತಾಯ ಮಾಡುವುದು ಅವಶ್ಯಕವಾಗಿದೆ ಎಂದರು.

ರವೀಂದ್ರ ಅಷ್ಟ್ಟಗಿ, ಬಸಯ್ಯ ವಸ್ತ್ರದ, ಕೊರಡೂರ, ಮಹದೇವ ಕವಿಶೆಟ್ಟಿ, ಶಿವಾನಂದ ಬಾಗಲಕೋಟಮಠ, ಮಲ್ಲೇಶಪ್ಪ ಕುಚನೂರ, ಡಾ. ರವಿ ಜಮಖಂಡಿ, ವಿಜಯಪುರದ ಸಾಹಿತಿ ಸಿದ್ದಣ್ಣ ಉತ್ನಾಳ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇಂಜಿನಿಯರ್ ಸುರೇಶ್ ಶಂಕರಪ್ಪ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪುಸ್ತಕಾವಲೋಕನಕ್ಕೆ 6 ತಿಂಗಳು ಅಗತ್ಯ ಪುಸ್ತಕಗಳನ್ನು ನೀಡುವುದಾಗಿ ವಾಗ್ದಾನ ಮಾಡಿದ ಮಲ್ಲೇಶಪ್ಪ ಕುಚನೂರ, 50ಕ್ಕೂ ಹೆಚ್ಚು ಪುಸ್ತಕಗಳನ್ನು ರಬಕವಿ-ಬನಹಟ್ಟಿ ತಾಲೂಕು ಕಸಾಪ ಘಟಕಕ್ಕೆ ಕೊಡುವುದಾಗಿ ಅನುಪಮ ಪ್ರಕಾಶನದ ಸಿದ್ದಣ್ಣ ಉತ್ನಾಳ ಅವರನ್ನು ಸನ್ಮಾನಿಸಲಾಯಿತು.

ಶಿವಾನಂದ ದಾಶಾಳ, ಪರಪ್ಪ ಪೂಜಾರಿ, ಡಾ. ಸಂಗಮೇಶ ಹತಪಾಕಿ, ನಗರಸಭಾ ಸದಸ್ಯೆ ಗೌರಿ ಮಿಳ್ಳಿ, ಸವಿತಾ ಹೊಸೂರ, ಸುಭದ್ರಾ ಪೂಜಾರಿ, ಹೇಮಾ ಸು. ಪಟ್ಟಣಶೆಟ್ಟಿ, ಪ್ರಭಾವತಿ ಕೋಟ್ಯಾಳ, ಶ್ರೀಶೈಲ ಬುರ್ಲಿ, ಡಿ.ಬಿ. ಜಾಯಗೊಂಡ, ಈರಣ್ಣ ಗಣಮುಖಿ ಇದ್ದರು.

ಶಿಕ್ಷಕಿ ರತ್ನಾ ಝಳಕಿ, ಶ್ವೇತಾ ದುಂಬಾಳೆ ಪ್ರಾರ್ಥಿಸಿದರು. ಶರತ್‌ಜಂಬಗಿ ಸ್ವಾಗತಿಸಿದರು. ಎನ್.ಎನ್. ಬೇವೂರ ನಿರೂಪಿಸಿದರು. ದಾನಪ್ಪ ಆಸಂಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net