ಸೌಹಾರ್ದ ಕಾಯ್ದೆಯಿಂದ ಹೆಚ್ಚಿನ ಸೌಲಭ್ಯ

3 nrp 2
Published on

ಎನ್.ಆರ್.ಪುರ: 1999ರಲ್ಲಿ ಸರ್ಕಾರ ಸೌಹಾರ್ದ ಸಹಕಾರ ಕಾಯ್ದೆ ತಂದಿದ್ದರಿಂದ ಜನರಿಗೆ ಹೆಚ್ಚು ಸೌಲಭ್ಯ ನೀಡಲು ಸಹಕಾರಿಯಾಗಿದೆ ಎಂದು ತಾಲೂಕು ಒಕ್ಕಲಿಕರ ಸಂಘದ ಭದ್ರಾ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಎಸ್.ಎಸ್.ಶಾಂತಕುಮಾರ್ ಹೇಳಿದರು.

ಪಟ್ಟಣದ ಡಿಸಿಎಂಸಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ತಾಲೂಕು ಒಕ್ಕಲಿಗರ ಸಂಘದ ಭದ್ರಾ ಸೌಹಾರ್ದ ಸಹಕಾರ ಸಂಘದಿಂದ ಸೌಹಾರ್ದ ಸಹಕಾರ ಕಾಯ್ದೆ ಬಂದು 25 ವರ್ಷ ತುಂಬಿದ ನೆನಪಿನಲ್ಲಿ ಧ್ವಜಾರೋಹಣ ನೆರವೇರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, 1959ರಲ್ಲಿ ಸಹಕಾರ ಕಾಯ್ದೆ ಜಾರಿಗೆ ಬಂದಿತು. 1999 ರಲ್ಲಿ ಹೊಸ ಸೌಹಾರ್ದ ಕಾಯ್ದೆ ಜಾರಿಯಾಗಿದ್ದು, ಈ ವರ್ಷಕ್ಕೆ ಸೌಹಾರ್ದ ಕಾಯ್ದೆಗೆ 25 ವರ್ಷ ತುಂಬುತ್ತಿದೆ. ಹೊಸ ಸೌಹಾರ್ದ ಕಾಯ್ದೆಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಅನುಕೂಲವಾಗಿದೆ. ತಾಲೂಕು ಒಕ್ಕಲಿಗರ ಸಂಘದ ಭದ್ರಾ ಸೌಹಾರ್ದ ಸಹಕಾರ ಸಂಘಕ್ಕೆ 23 ವರ್ಷ ತುಂಬಿದ್ದು ಈಗ ವಾರ್ಷಿಕ 6 ಕೋಟಿ ರೂ. ವ್ಯವಹಾರ ಮಾಡುತ್ತಿದೆ ಎಂದರು.

ಭದ್ರಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ಮೋಹನ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ಬಿಳಾಲುಮನೆ ಉಪೇಂದ್ರ, ನಿರ್ದೇಶಕರಾದ ಕೃಷ್ಣ್ಣಪ್ಪಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲ್ಪನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net