ರಾಯಣ್ಣನ ಪುಣ್ಯಸ್ಮರಣೆ ಆಚರಣೆ

MTG 26-1
Published on

ಮೋರಟಗಿ: ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ತನ್ನ ಪ್ರಾಣವನ್ನೇ ದೇಶಕ್ಕಾಗಿ ಸಮರ್ಪಿಸಿದ ಕ್ರಾಂತಿ ಜ್ಯೋತಿ ಸಂಗೊಳ್ಳಿ ರಾಯಣ್ಣ ಎಂದು ಶಿವಾನಂದ ಕೆರಿಗೊಂಡ ಹೇಳಿದರು.

ಗ್ರಾಮದ ಸಂಗೊಳ್ಳಿ ರಾಯಣ್ಣರ ವೃತ್ತದಲ್ಲಿ ಗಣರಾಜೋತ್ಸವ ಹಾಗೂ ರಾಯಣ್ಣನ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ, ಹೊರ ಪೊಲೀಸ್ ಠಾಣೆ, ಕಲ್ಪವೃಕ್ಷ ಪ್ರೌಢ, ಪ್ರಾಥಮಿಕ ಶಾಲೆ, ಸದ್ಬಾವನ ಜ್ಞಾನಜ್ಯೋತಿ, ಐಡಿಎಲ್, ಕೃಷಿ ಪತ್ತಿನ ಸಹಕಾರಿ ಬ್ಯಾಂಕ್, ನೂರಂದೇಶ್ವರ ಹಾಗೂ ಬಸವೇಶ್ವರ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಪಶುಸಂಗೋಪನಾ ಇಲಾಖೆ, ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ಗ್ರಾಪಂ ಮಾಜಿ ಅಧ್ಯಕ್ಷ ಮುತ್ತಪ್ಪ ಸಿಂಗೆ, ಕೆರಿಸಿದ್ಧೇಶ್ವರ ಪಟ್ಟದ ಗುರು ರಾವತ್ರಾಯ ದೇವರು, ಎಎಸ್‌ಐ ಎಸ್. ಉಕ್ಕಲಿ, ಎಲ್.ಯು. ನದಾಫ್, ಮುರುಳಿ ಬಡಿಗೇರ, ಎಂ.ಎಸ್. ಬಡಿಗೇರ, ಅಮ್ಮಣ್ಣ ಕೆರಿಗೊಂಡ, ಹಣಮಂತ ಮದರಿ, ಸಿದ್ದು ಅತ್ನೂರ, ಸಂತೋಷ ಕೆರಿಗೊಂಡ, ಸಂಜು ದೇಸಾಯಿ, ವಿದ್ಯಾಧರ ಮಳಗಿ, ಮೂನೇಶ ಮದರಿ, ಶಂಕರ ದಿಡ್ಡಿಮನಿ, ರಪೀಕ್ ದೇವರನಾವದಗಿ, ಸಾವಳಿಗೆಪ್ಪ ನೆಲ್ಲಗಿ, ಪಿಂಟು ಭಾರತಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net