ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೈಲಾದಷ್ಟು ಧನ ಸಹಾಯ ಮಾಡಿ

Moratagi 17-1
Published on

ಮೋರಟಗಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಲು ಮುಂದಾಗಬೇಕೆಂದು ಬಿಜೆಪಿ ಮಂಡಳ ಅಧ್ಯಕ್ಷ ಈರಣ್ಣ ರಾವೂರ ಹೇಳಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಹಿನ್ನೆಲೆ ಗ್ರಾಮದ ಹನುಮಾನ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಹಿಂದು ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ಶೇಖರಗೌಡ ಹರನಾಳ, ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಂದಾ ಯಂಪೂರೆ ಮಾತನಾಡಿದರು.

ತಾಪಂ ಸದಸ್ಯ ಮಡಿವಾಳಪ್ಪ ಬೋನಾಳ, ವೈದ್ಯಾಧಿಕಾರಿ ಸುನೀತಾ ಸಾಲಿಮಠ, ಸುರೇಶ ಮಳಲಿ, ಸುದರ್ಶನ ಜಂಗಾಣಿ, ಅನಸುಬಾಯಿ ಪರಗೊಂಡ, ಬಸವರಾಜ ಬಿರಾದಾರ, ಸಿದ್ದಮ್ಮ ಹಳಗೊಂಡ, ಯಲ್ಲಾಲಿಂಗ ಮಳ್ಳಿ, ಗುರು ಅಗಸರ, ಶ್ರೀಶೈಲ ಕಲಬುರಗಿ, ನಾಗೇಶ ಶಾಬಾದಿ, ಶರಣು ಮಳಗಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net