ಮೊರಾರ್ಜಿ ದೇಸಾಯಿ ಶಾಲಾ ಸಂಸತ್ತು ಚುನಾವಣೆ

samsath chunavane
Published on

ಕುಶಾಲನಗರ: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸಂಸತ್ತು ಚುನಾವಣೆ ನಡೆಯಿತು.

ಕೇಂದ್ರ ಮತ್ತು ರಾಜ್ಯಗಳಿಗೆ ನಡೆಯುವ ಸಾರ್ವಜನಿಕ ಮಾದರಿಯ ಚುನಾವಣಾ ನಿಯಮಾನುಸಾರ ಶಾಲಾ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕುನ್ನು ಚಲಾಯಿಸುವ ಬಗ್ಗೆ ತಿಳಿವಳಿಕೆ ಬರುವ ರೀತಿಯಲ್ಲಿ ಶಾಲಾ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಎಲೆಕ್ಟ್ರಾನಿಕ್ ಯಂತ್ರದ ಮೂಲಕ ಗೌಪ್ಯವಾಗಿ ಮಾಡ ಮತ ಚಲಾವಣೆ ಮಾಡಿದರು.

ಚುನಾವಣಾ ಅಧಿಕಾರಿಯಾಗಿ ಶಾಲಾ ಪ್ರಾಂಶುಪಾಲ ಕೆ.ಪ್ರಕಾಶ್, ಸಹಾಯಕ ಅಧಿಕಾರಿಯಾಗಿ ನಾಗೇಂದ್ರ, ಪೋಲಿಸ್ ಅಧಿಕಾರಿಯಾಗಿ ದಿನೇಶ್ ಆರ್ಚಾರಿ, ಸೇರಿದಂತೆ ಸಹಾಯಕ ಚುನಾವಣಾ ಸಿಬ್ಬಂದಿಗಳಾಗಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು.

ಮುಖ್ಯ ಮಂತ್ರಿಯಾಗಿ ಎಂ.ಜೆ.ಸೃಜನ್, ಉಪ ಮುಖ್ಯ ಮಂತ್ರಿಯಾಗಿ ಜಿ.ಎಸ್ ಶುಭಶ್ರೀ, ಶಿಕ್ಷಣ ಸಚಿವರಾಗಿ ಪಂಚಮಿ, ಮತ್ತು ರಿಯಾನ, ಅಹಾರ ಸಚಿವರಾಗಿ ಮನೋಹರ, ಮತ್ತು ಭವಾನಿ, ಕ್ರೀಡಾ ಸಚಿವರಾಗಿ ಉಜ್ಜಲ್ ಮತ್ತು ಹಿಮಾನಿ, ತೋಟಗಾರಿಕೆ ಸಚಿವರಾಗಿ ಕಿಶೋರ್ ಮತ್ತು ಗೌತಮಿ, ವಾರ್ತಾ ಸಚಿವರಾಗಿ ರೋಹಿತ್ ಮತ್ತು ಲಿತ್ಯಾ ಆಯ್ಕೆಗೊಂಡಿರುತ್ತಾರೆ.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಸಿ.ಪಿ.ಮಂಜು, ಆಸೀಫ್, ದೊಡ್ಡಯ್ಯ, ಎಸ.ಎಸ್.ಹರಿಣಾಕ್ಷಿ, ತ್ರಿವೇಣಿ, ಅಶ್ವಿನಿ, ಅಂಕಿತಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net