

ವಿಜಯವಾಣಿ ಸುದ್ದಿಜಾಲ ಧಾರವಾಡ
ಬದುಕಿನ ಎಲ್ಲ ಹಂತಗಳಲ್ಲೂ ಅನ್ವಯವಾಗುವ ನೀತಿ ಪಾಠ ಹಾಗೂ ಜೀವನದ ನೈತಿಕ ಮೌಲ್ಯಗಳನ್ನು ತಮ್ಮ ತ್ರಿಪದಿಗಳಲ್ಲಿ ಸಂತ ಕವಿ ಶ್ರೇಷ್ಠ ಸರ್ವಜ್ಞನು ಸಮಾಜಕ್ಕೆ ಸಾಹಿತ್ಯದ ಮೂಲಕ ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವಜ್ಞರು ಸರ್ವ ವಿಷಯಗಳನ್ನು ಕುರಿತು ಬ್ರಹ್ಮನಂತೆ ತ್ರಿಪದಿಗಳನ್ನು ರಚಿಸಿ, ಜನಸಾಮಾನ್ಯರಿಗೆ ಉನ್ನತ ಜೀವನದ ಪಾಠ ಬೋಧಿಸಿದ್ದಾರೆ. ಅವರು ಆಡು ಭಾಷೆ ಮೂಲಕ ಜನರಿಗೆ ಬದುಕಿನ ಶ್ರೀಮಂತಿಕೆ ವಿವರಿಸಿದ್ದಾರೆ. ತಮ್ಮ ತ್ರಿಪದಿ ವಚನಗಳ ಮೂಲಕ ಕನ್ನಡ ಸಾಹಿತ್ಯ ಬೆಳಸಿ ಉತಷ್ಟ ಕೊಡುಗೆ ನೀಡಿದ್ದಾರೆ. ಸರಳ ಭಾಷೆಯಲ್ಲಿ ಸಮಾಜದ ಅಂಕು ಡೊಂಕನ್ನು ತ್ರಿಪದಿಯ ಮುಖಾಂತರ ಸಾರಿದ್ದಾರೆ ಎಂದರು.
ಗ್ರಂಥಪಾಲಕ ಡಾ.ರಾಜಶೇಖರ ಕುಂಬಾರ ಉಪನ್ಯಾಸ ನೀಡಿದರು. ಜಿಲ್ಲಾ ಕರ್ನಾಟಕ ಪ್ರದೇಶ ಕುಂಬಾರ ಸಂಘದ ಅಧ್ಯಕ್ಷ ಬಸವಂತಪ್ಪ ಚಕ್ರಸಾಲಿ, ಬಸವರಾಜ ಕುಂಬಾರ, ಎಂ.ಪಿ.ಕುಂಬಾರ, ಶಂಕರ ಕುಂಬಾರ, ಎಸ್.ಎಸ್. ಅಂಗಡಿ, ಇತರರು ಇದ್ದರು.
ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ನಿರೂಪಿಸಿದರು.