ಶಾಂತಿವನದಿಂದ ನೈತಿಕ ಶಿಕ್ಷಣ, ಯೋಗ ತರಬೇತಿ

Btw_Shanthivana
Published on

ಬಂಟ್ವಾಳ: ಶಾಂತಿವನ ಟ್ರಸ್ಟ್ 35 ವರ್ಷಗಳಿಂದ ಯೋಗ ಮತ್ತು ನೈತಿಕ ಶಿಕ್ಷಣ ನೀಡುತ್ತಿದೆ. ಡಿಸೆಂಬರ್‌ನಲ್ಲಿ ರಾಜ್ಯಮಟ್ಟದ ಸ್ಪರ್ಧೆ ಧರ್ಮಸ್ಥಳದಲ್ಲಿ ನಡೆಯಲಿದೆ ಎಂದು ಧರ್ಮಸ್ಥಳ ಶಾಂತಿವನ ಟ್ರಸ್ಟ್ ನಿರ್ದೇಶಕ ಡಾ.ಐ.ಶಶಿಕಾಂತ್ ಜೈನ್ ಹೇಳಿದರು.

ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ, ಜ್ಞಾನವರ್ಷಿಣಿ ಮತ್ತು ಜ್ಞಾನ ದರ್ಶಿನಿ ಪುಸ್ತಕಗಳ ಮೌಲ್ಯಾಧಾರಿತ ವಿವಿಧ ಸ್ಪರ್ಧೆಗಳನ್ನು ಪೆರ್ನೆ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಶೇಖರ ರೈ ಇದ್ದರು. ಪ್ರೌಢಶಾಲೆ ಮುಖ್ಯಶಿಕ್ಷಕ ಸತ್ಯನಾರಾಯಣ ರೈ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ತಾರಾನಾಥ ಶೆಟ್ಟಿ, ಸಿ.ಆರ್.ಪಿ. ಸತೀಶ ರಾವ್ ಮಾಣಿ, ಶಾಂತಿವನ ಟ್ರಸ್ಟ್ ಸ್ಪರ್ಧೆಯ ಸಂಯೋಜಕ ಯೋಗ ಶಿಕ್ಷಕ ಚೆನ್ನಕೇಶವ ಪೆರ್ನೆ ಸ್ವಾಗತಿಸಿದರು. ಶಿಕ್ಷಕಿ ಆಶಾಲತಾ ನಿರೂಪಿಸಿದರು.

ಕರ್ನಾಟಕ ಹೈಸ್ಕೂಲ್ ಪುಂಜಾಲಕಟ್ಟೆಯಲ್ಲಿ ನವೆಂಬರ್ 21ಕ್ಕೆ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ತಾಲೂಕುಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net