ಸಿಐಡಿ ಎಸ್ಪಿ ಭೀಮಾಶಂಕರ್ ಗುಳೇದ್ ಕಾರು ಅಪಘಾತ

Accident
Published on

ಶಿವಮೊಗ್ಗ: ಸಿಐಡಿ ಎಸ್ಪಿ ಭೀಮಾಶಂಕರ್ ಗುಳೇದ್ ಪ್ರಯಾಣಿಸುತ್ತಿದ್ದ ಸರ್ಕಾರಿ ಕಾರು ಹಾಗೂ ಟಿವಿಎಸ್ ಮೊಪೆಡ್ ನಡುವೆ ಮಂಗಳವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು, ಟಿವಿಎಸ್​ನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.

ಶಿವಮೊಗ್ಗದ ನಜೀರ್ (35), ಮುಸ್ಕಾನ್(9) ಅಮ್ರೀನ್ (14) ಎಂಬುವರು ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಶಿವಮೊಗ್ಗದಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದು, ಸಿಐಡಿ ಎಸ್ಪಿ ಭೀಮಾಶಂಕರ್ ಗುಳೇದ್ ಅವರು ನಿಯೋಜನೆ ಮೇಲೆ ಇಲ್ಲಿಗೆ ಆಗಮಿಸಿದ್ದರು. ಭೀಮಾಶಂಕರ್ ಅವರು ವಾಸ್ತವ್ಯ ಮಾಡಿದ್ದ ಹೋಟೆಲ್​ನಿಂದ ಮಂಗಳವಾರ ಬೆಳಗ್ಗೆ ಬಂದೋಬಸ್ತ್​ಗೆ ತೆರಳುತ್ತಿದ್ದ ವೇಳೆ ಆಲ್ಕೊಳ ವೃತ್ತದಲ್ಲಿ ಅಪಘಾತ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net