

ಉಡುಪಿ: ವಕೀಲ ವೃತ್ತಿಯಲ್ಲಿ ನಿರಂತರ ಅಧ್ಯಯನ ಮುಖ್ಯ. ಎಲ್ಲ ಕಡೆಗಳಿಂದ ಜ್ಞಾನ ಸ್ವೀಕರಿಸಬೇಕು. ಸಮಾಜದ ಅಭ್ಯುದಯವೇ ವಕೀಲರ ಗುರಿಯಾಗಿರಬೇಕು. ಇಂಥ ಅಣುಕು ನ್ಯಾಯಲಯ ಸ್ಪರ್ಧೆಗಳಿಂದ ವೃತ್ತಿಪರಕೌಶಲ್ಯ ವೃದ್ಧಿಯಾಗುತ್ತದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಹೇಳಿದರು.
ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಪಿ.ಶಿವಾಜಿ ಶೆಟ್ಟಿ ಸ್ಮರಣಾರ್ಥ 8ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದ ಅಂತಿಮ ಉದ್ದೇಶ ಸಂತೋಷ ಪ್ರಾಪ್ತಿ. ಉತ್ತಮ ವ್ಯಕ್ತಿತ್ವ ಹೊಂದಿ ಬದುಕನ್ನು ಪ್ರೀತಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರೇ ಮುಂಚೂಣಿಯಲ್ಲಿದ್ದರು. ದೇಶದಲ್ಲಿ ರಾಜಕೀಯ ಚುನಾವಣೆ ಪ್ರಣಾಳಿಕೆ ಬದಲು ಸಂವಿಧಾನದಲ್ಲಿರುವ ರಾಜ್ಯ ನಿರ್ದೇಶಕ ತತ್ವಗಳು ಜಾರಿಯಾಗಬೇಕು. ನಿಜಾರ್ಥದಲ್ಲಿ ಇದೇ ದೇಶದ ಪ್ರಣಾಳಿಕೆ ಎಂದರು.
ದಿ.ಶಿವಾಜಿ ಶೆಟ್ಟಿ ಅವರ ದಂಪತಿ ಜಯಂತಿ ಪಿ.ಶಿವಾಜಿ ಶೆಟ್ಟಿ, ವೈಕುಂಠ ಬಾಳಿಗ ಕಾನೂನು ಕಾಲೇಜಿನ ನಿರ್ದೇಶಕಿ ಡಾ. ನಿರ್ಮಲಾ ಕುಮಾರಿ ಕೆ., ಕಾರ್ಯಕ್ರಮ ಸಂಯೋಜಕಿ ಸುರೇಖಾ ಕೆ., ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ್ ಪಿ.ಎಸ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ರಘುನಾಥ್ ಕೆ.ಎಸ್ .ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಅಮೋಘಾ ಗಾಡ್ಕರ್ ವಂದಿಸಿ, ವಿದ್ಯಾರ್ಥಿನಿ ಮರಿಯ ಥೆರೆಸಾ ನಿರೂಪಿಸಿದರು.