ಬಸವನಬಾಗೇವಾಡಿಯಲ್ಲಿ ಮೂಲನಂದೀಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ

Moolandishwara, Silver Palanquin Utsav, Basavanbagewadi,
ಬಸವನಬಾಗೇವಾಡಿಯ ಬಸವೇಶ್ವರ ಜಾತ್ರೆಯಲ್ಲಿ ಸಚಿವ ಶಿವಾನಂದ ಪಾಟೀಲರು ಬೆಳ್ಳಿ ಪಲ್ಲಕ್ಕಿ ಹೊತ್ತು ಮೆರವಣಿಗೆಗೆ ಚಾಲನೆ ನೀಡಿದರು. ಎಂ.ಜಿ.ಆದಿಗೊಂಡ, ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ ಇತರರಿದ್ದರು.
Published on

ಬಸವನಬಾಗೇವಾಡಿ: ಕರ್ನಾಟಕ, ಮಹಾರಾಷ್ಟ್ರ, ಸೀಮಾಂದ್ರ, ತೆಲಂಗಾಣ, ತಮಿಳುನಾಡು ಹಾಗೂ ರಾಜ್ಯದ ರಾಜ್ಯದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಇತರ ಜಿಲ್ಲೆಗಳ ಸಹಸ್ರಾರು ಭಕ್ತ ಸಮೂಹದಲ್ಲಿ ಬಸವೇಶ್ವರ (ಮೂಲನಂದೀಶ್ವರ) ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಶ್ರಾವಣ ಮಾಸದ 3ನೇ ಸೋಮವಾರ ಬೆಳಗಿನ ಜಾವ 4 ರಿಂದ ಆರಂಭವಾದ ಅಭಿಷೇಕ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಹರಕೆ ತೀರಿಸಿದರು. ಇನ್ನೂ ಕೆಲ ಭಕ್ತರು ಉರುಳು ಸೇವೆ ಮಾಡಿದರು. ದೇವಸ್ಥಾನದಲ್ಲಿನ ನಂದೀಶ್ವರ ಮೂರ್ತಿಗೆ ವಿಶೇಷ ಅಭಿಷೇಕ ನೆರವೇರಿದ ನಂತರ ವಿವಿಧ ಹೂವು, ವೀಳ್ಯದ ಎಲೆ ಹಾಗೂ ವಿವಿಧ ಆಭರಣಗಳಿಂದ ಅಲಂಕರಿಸಲಾಗಿತ್ತು. ಕುಟುಂಬ ಸಮೇತರಾಗಿ ಬಂದಿದ್ದ ಭಕ್ತರು ದೇವಸ್ಥಾನ ಆವರಣದಲ್ಲಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ ಕೆಲವು ಭಕ್ತರಿಗೆ ಊಟ ಬಡಿಸಿದರು.

ದೇವಸ್ಥಾನದಲ್ಲಿ ಮೂಲನಂದೀಶ್ವರ ಮೂರ್ತಿಗೆ ಪೂಜೆ, ಆರತಿ ಮಾಡಿದ ನಂತರ ಸಚಿವ ಶಿವಾನಂದ ಪಾಟೀಲ ಅವರು ನಂದಿ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿ ಕಟ್ಟೆಯಲ್ಲಿನ ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದರು. ನಂತರ ಬೀಳೂರ ಶಂಖದ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿ, ಪಟ್ಟಣದ ಸಿದ್ದಲಿಂಗ ಶ್ರೀಗಳು ಹಾಗೂ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜಯ ಘೋಷಣೆಯೊಂದಿಗೆ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಪಟ್ಟಣದ ಶಿವಪ್ಪ ಮೋದಿ ಅವರ ಮನೆಗೆ ತೆರಳಿ ಹೋರಿಮಟ್ಟಿ ಗುಡ್ಡದ ದೇವಸ್ಥಾನದ ಕಲಶಕ್ಕೆ ಪೂಜೆ ಸಲ್ಲಿಸಿದ ನಂತರ ನಿಡಗುಂದಿ ಮನೆತನದವರು ಕಳಸ ಹೊತ್ತುಕೊಂಡು ಅಗಸಿ, ಬವಸವೇಶ್ವರ ವೃತ್ತ, ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಇಂಗಳೇಶ್ವರ ರಸ್ತೆ ಮಾರ್ಗವಾಗಿ ವಿಜೃಂಭಣೆಯಿಂದ ಬೆಳ್ಳಿ ಪಲ್ಲಕ್ಕಿ ಉತ್ಸವು ಸಂಚರಿಸಿ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ತೆರಳಿತು.

ಬೆಳ್ಳಿ ಪಲ್ಲಕ್ಕಿ ಉತ್ಸವದ ಮೆರಣಿಗೆಯಲ್ಲಿ ಸಚಿವ ಶಿವಾನಂದ ಪಾಟೀಲ, ಜಾತ್ರಾ ಕಮಿಟಿ ಅಧ್ಯಕ್ಷ ಎಂ.ಜಿ.ಆದಿಗೊಂಡ, ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಸುರೇಶ ಹಾರಿವಾಳ, ಶಂಕರಗೌಡ ಬಿರಾದಾರ, ಶಿವನಗೌಡ ಬಿರಾದಾರ, ಸಂಕನಗೌಡ ಪಾಟೀಲ, ಸಂಗು ವಾಡೇದ, ಬಸವರಾಜ ಗೊಳಸಂಗಿ, ರವಿ ಪಟ್ಟಣಶೆಟ್ಟಿ, ಬಸವರಾಜ ಕೋಟಿ, ರವಿ ರಾಠೋಡ, ಸಂಗಯ್ಯ ಕಾಳಹಸ್ತೇಶ್ವರಮಠ, ವಿಶ್ವನಾಥ ಹಾರಿವಾಳ, ಡಾ.ಕರುಣಾಕರ ಚೌಧರಿ, ಉಮೇಶ ಹಾರಿವಾಳ, ರವಿ ಚಿಕ್ಕೊಂಡ, ಬಸವರಾಜ ರಾಯಗೊಂಡ, ಸಂಗಮೇಶ ಓಲೇಕಾರ, ಜಗದೇವಿ ಗುಂಡಳ್ಳಿ, ಶ್ರೀಶೈಲ ಹೆಬ್ಬಾಳ, ಮುತ್ತು ಕಿಣಗಿ, ಬಸವರಾಜ ಸಂಡೆ, ಸಿದ್ದಣ್ಣ ಮೊದಿ, ರಾಜು ಪಟ್ಟಣಶೆಟ್ಟಿ, ಸಂಗಪ್ಪ ವಾಡೇದ, ಮುತ್ತು ಡಂಬಳ, ಪಿಂಟು ಪಾಟೀಲ, ಮಂಜು ಹಾರಿವಾಳ, ಮಂಜು ಜಾಲಗೇರಿ, ಶ್ರೀಧರ ತೆಲಗಿ, ವೀರೇಶ ಕುಂಟೋಜಿ, ಹರೀಶ ಅಗರವಾಲ, ಬಸವರಾಜ ಅಳ್ಳಗಿ, ಮಲ್ಲು ನಾಯಕ, ಶೇಖರಗೌಡ ಪಾಟೀಲ, ಶ್ರೀಕಾಂತ ಪಟ್ಟಣಶೆಟ್ಟಿ, ಮುತ್ತು ಕಿಣಗಿ, ಶಿಲ್ಪಾ ಕಿಣಗಿ, ಸುಜಾತಾ ಮೋದಿ, ಶೋಭಾ ಚಿಕ್ಕೊಂಡ, ಲಕ್ಷ್ಮೀ ಕಿಣಗಿ, ಶಿವಬಾಯಿ ಸಜ್ಜನ, ಬೇಬಿ ತಗ್ಗಿನಮಠ ಇತರರಿದ್ದರು.

ವಿವಿಧ ಕಲಾ ತಂಡಗಳ ವೈಭವ
ರಾಜ್ಯ-ಹೊರರಾಜ್ಯಗಳಿಂದ ಆಗಮಿಸಿದ ಕಲಾ ತಂಡಗಳು, ಗ್ರಾಮೀಣ ಸೊಗಡಿನ ವಾದ್ಯ ಮೇಳಗಳು ಮೆರವಣಿಗೆಗೆ ಮೆರಗು ನೀಡಿದವು. ಸಂಜೆ 7ಕ್ಕೆ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಬಳಿಯ ಪಲ್ಲಕ್ಕಿ ಕಟ್ಟೆಗೆ ಮೆರವಣಿಗೆ ಬಂದು ತಲುಪಿತು. ನಂತರ ಸಕಲ ವಾದ್ಯ ವೈಭವದೊಂದಿಗೆ ಆನೆ ಅಂಬಾರಿ, ಬೆಳ್ಳಿ ಪಲ್ಲಕ್ಕಿಯನ್ನು ಪುನಃ ದೇವಸ್ಥಾನಕ್ಕೆ ತರಲಾಯಿತು. ನಂತರ ರಾತ್ರಿ ಪೂರ್ತಿ ಪಲ್ಲಕ್ಕಿ ಉತ್ಸವ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net