ಸ್ವಕುಳಸಾಳಿ ಶ್ರೀ ಪಟ್ಟಾಭಿಷೇಕ ಮಹೋತ್ಸವ

SWAKULASALI MATT MLK
Published on

ಮೊಳಕಾಲ್ಮೂರು: ಪಟ್ಟಣದಲ್ಲಿರುವ ಸ್ವಕುಳಸಾಳಿ ಗುರುಪೀಠದ ಶ್ರೀ ಜಿಹ್ವೇಶ್ವರಾನಂದ ಭಾರತಿ ಸ್ವಾಮೀಜಿ ಅವರ ಪ್ರಥಮ ವರ್ಷದ ಪೀಠಾರೋಹಣ ಸಮಾರಂಭ ಫೆ.1ರಂದು ಆಯೋಜಿಸಲಾಗಿದೆ.

ಇಲ್ಲಿನ ಸರ್ವೋದಯ ಶಾಲೆ ಸಮೀಪದಲ್ಲಿರುವ ಗುರುಪೀಠದ ಆವರಣದಲ್ಲಿ ಅಂದು ಬೆಳಗ್ಗೆ 10.45ಕ್ಕೆ ನಡೆಯುವ ಕಾರ್ಯಕ್ರಮವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಮಾಜದ ರಾಜ್ಯಾಧ್ಯಕ್ಷ ಚಂದ್ರಕಾಂತ್ ಎನ್.ಭಂಡಾರೆ ಅಧ್ಯಕ್ಷತೆ ವಹಿಸುವರು.

ಯೋಗಗುರು ಬಾಬಾ ರಾಮ್‌ದೇವ್, ಶ್ರೀ ಶಿವಮೂರ್ತಿ ಮುರುಘಾ ಶರಣರು, ಬಾಳೇ ಹೊಸೂರು ದಿಂಗಾಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಹರಿದ್ವಾರ ಪತಂಜಲಿ ಯೋಗ ಪೀಠದ ಶ್ರೀ ಆಚಾರ್ಯ ಪ್ರದ್ಯುಮ್ನ ಗುರೂಜಿ, ಆನಂದ ಗುರೂಜಿ, ಹಂಪಿ ಹೇಮಕೂಟ ಮಠದ ಶ್ರೀ ದಯಾನಂದಪುರಿ ಸ್ವಾಮೀಜಿ, ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸುವರು.

ಸಚಿವ ಬಿ.ಶ್ರೀರಾಮುಲು, ಮಾಜಿ ಸಚಿವರಾದ ಎಚ್.ಆಂಜನೇಯ, ಪಿ.ಜಿ.ಆರ್.ಸಿಂಧ್ಯ, ಉಮಾಶ್ರೀ, ಸಂಸದ ಎ.ನಾರಾಯಣಸ್ವಾಮಿ, ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ, ಶಾಸಕ ಕಾಪು ರಾಮಚಂದ್ರಾರೆಡ್ಡಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net