ಬಡ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

MLK KIT 18
Published on

ಮೊಳಕಾಲ್ಮೂರು: ಬಿಜೆಪಿ ಕಾರ್ಯಕರ್ಯರು ಶನಿವಾರ ತಾಲೂಕಿನ ದೇವಸಮುದ್ರ ಗ್ರಾಮದ 60 ಬಡ ಕುಟುಂಬಗಳಿಗೆ ಶನಿವಾರ ಆರೋಗ್ಯ ಸಚಿವ ಬಿ. ಶ್ರೀರಾಮುಲು ಕೊಡಮಾಡಿರುವ 10 ಕೆ.ಜಿ. ಆಹಾರದ ಕಿಟ್ ವಿತರಣೆ ಮಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ್ ಮಾತನಾಡಿ, ಸಚಿವರ ಸೂಚನೆಯಂತೆ ಈಗಾಗಲೇ ವಿಧಾನಸಭಾ ಕ್ಷೇತ್ರದ 2 ಸಾವಿರ ಬಡ ಕಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ, ರವೆ, ಸೋಪು, ಸಾಂಬರ್ ಪದಾರ್ಥ ಉಳ್ಳ ಒಟ್ಟು 10 ಕೆ.ಜಿ. ತೂಕದ ಕಿಟ್ ಆಹಾರದ ಕಿಟ್ ನೀಡಲಾಗಿದೆ. ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದ ಬಹುತೇಕ ಬಡ ಜನತೆಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು.

ಸಚಿವರ ಆಪ್ತ ಸಹಾಯಕ ಪಾಪೇಶ್‌ನಾಯಕ, ತಾಪಂ ಸದಸ್ಯ ನರೇಂದ್ರಬಾಬು, ಜಿಂಕ್ಲು ಬಸವರಾಜ್, ಹಾನಗಲ್ ಪರಮೇಶಿ, ತಿಪ್ಪೇಸ್ವಾಮಿ, ಬಸಣ್ಣ, ವಕೀಲ ಪರಮೇಶ್ವರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net