ಮೈಸೂರಿನಲ್ಲಿ ಪಕ್ಷಿಗಳಿಗೆ ನೀರು, ಆಹಾರ ನೀಡುವ ‘ಮೂಕಸ್ಪಂದನೆ’ ಅಭಿಯಾನಕ್ಕೆ ಚಾಲನೆ

'Mookaspandane' campaign to provide water and food to birds launched in Mysuru
Published on

ಮೈಸೂರು: ಬೇಸಿಗೆಯ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಕ್ಷಿಗಳಿಗೆ ನಗರದ ವಿವಿಧೆಡೆ ನೀರು ಮತ್ತು ಅಹಾರ ದೊರೆಯುವಂತೆ ಮಾಡುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನ ‘ಮೂಕಸ್ಪಂದನೆ’ ಅಭಿಯಾನಕ್ಕೆ ಮಂಗಳವಾರ ಚಾಲನೆ ದೊರೆಯಿತು.

ದಿವಾನ್ಸ್ ರಸ್ತೆಯಲ್ಲಿ ಮರ, ಗಿಡಗಳಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ಬಟ್ಟಲು ಅಳವಡಿಸುವ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಋತುಮಾನ ಬದಲಾಗುವುದು ಜಗದ ನಿಯಮ. ಅದಕ್ಕೆ ಹೊಂದಿಕೊಂಡು ಜೀವಿಸು ವುದು ಪ್ರತಿಯೊಬ್ಬರ ಕರ್ತವ್ಯ. ಬೇಸಿಗೆ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳು ಕುಡಿಯುವ ನೀರು ಹಾಗೂ ಆಹಾರದ ಕೊರತೆಯ ಸಮಸ್ಯೆಯನ್ನು ಎದುರಿಸುತ್ತದೆ. ಈ ಸಮಸ್ಯೆ ಮನಗಂಡು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ‘ಮೂಕಸ್ಪಂದನೆ’ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಈ ಹಿಂದೆ ಮೈಸೂರಿನ ಪ್ರತಿ ಮನೆಗಳ ಮುಂದೆ ಹಸು, ಕರು, ಪಕ್ಷಿಗಳು ನೀರು ಕುಡಿಯಲು ಕಲ್ಲಿನ ನೀರಿನ ತೊಟ್ಟಿ ಇಡುತ್ತಿದ್ದರು. ಪಶು, ಪಕ್ಷಿಗಳು ಆನಂದದಿಂದ ನೀರು ಕುಡಿದು ದಾಹ ನೀಗಿಸಿಕೊಳ್ಳುತ್ತಿದ್ದವು. ಆದರೆ, ಪ್ರಸ್ತುತ ಅವೆಲ್ಲ ಕಣ್ಮರೆ ಆಗಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಗರ ಪಾಲಿಕೆ ಮಾಜಿ ಸದಸ್ಯ ಸುಬ್ಬಯ್ಯ, ಪ್ರಮುಖರಾದ ಆರ್. ಪರಮೇಶ್‌ ಗೌಡ, ಕಿರಣ್ ಗೌಡ, ಎಸ್.ಎನ್. ರಾಜೇಶ್, ಚೇತನ್, ನಂಜಪ್ಪ, ಬೈರತಿ ಲಿಂಗರಾಜು, ವಿನೋದ್ ಅರಸ್, ನಾಗೇಶ್ ಯಾದವ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net