

ಬ್ಯಾಡಗಿ: ರಾಜ್ಯದ ಮಠಗಳು ತ್ರಿವಿಧ ದಾಸೋಹ ಪರಂಪರೆಯನ್ನು ನಿರಂತರವಾಗಿ ಮುನ್ನಡೆಸಿದ್ದು, ಸುಕ್ಷೇತ್ರ ಗುಡ್ಡದಮಲ್ಲಾಪುರ ಷ.ಬ್ರ. ಮೂಕಪ್ಪ ಶ್ರೀಗಳು ವೃಷಭರೂಪಿಯಾಗಿ ಭಕ್ತರ ಮನೆಗಳಿಗೆ ತೆರಳಿ ಪಾದಪೂಜೆಗಳಿಂದ ಸಂಗ್ರಹಿಸಿದ ದವಸ ಧಾನ್ಯಗಳಿಂದ ನಿತ್ಯ ಅನ್ನದಾಸೋಹ ನಡೆಸುವ ಮೂಲಕ ಸಾವಿರಾರು ವರ್ಷಗಳ ಪರಂಪರೆಯನ್ನು ಉಳಿಸಿದ್ದಾರೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಹೇಳಿದರು.
ಸ್ಥಳೀಯ ಮುಪ್ಪಿನಸ್ವಾಮಿ ಮಠದಲ್ಲಿ ಶ್ರಾವಣ ಮಾಸ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ವಿುಕ ಪೂಜಾ ಕಾರ್ಯಕ್ರಮದಲ್ಲಿ ಗುಡ್ಡದಮಲ್ಲಾಪುರ ಷ.ಬ್ರ. ಮೂಕಪ್ಪಸ್ವಾಮಿಗಳ ದರ್ಶನ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂಕಪ್ಪಸ್ವಾಮಿಗಳ ಧರ್ಮಕಾಯಕ ಮಾನವರೂಪದ ಮಠಾಧೀಶರಿಗಿಂತ ಭಿನ್ನವಾಗಿದ್ದು, ವೃಷಭರೂಪಿ ಮೂಕಪ್ಪ ಶಿವಯೋಗಿಗಳು ನಿತ್ಯವೂ ಭಕ್ತರ ಮನೆಮನೆಗೆ ತೆರಳಿ, ಪಾದಪೂಜೆಯೊಂದಿಗೆ ಭಕ್ತರಿಗೆ ಆಶೀರ್ವದಿಸಿ ಹರಸುತ್ತಿದ್ದಾರೆ. ಶ್ರೀ ಮಠದಲ್ಲಿ ಗೋಶಾಲೆ ಹಾಗೂ ನೂರಾರು ನಿರ್ಗತಿಕ ಮಕ್ಕಳಿಗೆ ಜ್ಞಾನ ದಾಸೋಹ ನಡೆಸಿರುವುದು ಮಹತ್ವವಾಗಿದೆ ಎಂದರು.
ಯುವಪೀಳಿಗೆಗೆ ಆಧುನಿಕ ಗುಂಗಿನಲ್ಲಿ ಧರ್ಮಕಾರ್ಯದಿಂದ ದೂರ ಉಳಿಯದೇ ಇಂತಹ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಮೂಕಪ್ಪ ಶ್ರೀಗಳನ್ನು ವಿವಿಧ ಭಕ್ತರು ಮನೆಮನೆಗೂ ಭಿನ್ನವಿಸಿ ಪಾದಪೂಜೆ ನಡೆಸಿದರು. ಬಳಿಕ ಪಟ್ಟಣದ ವಿವಿಧ ಬೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ಮೆರವಣಿಗೆ ಜರುಗಿತು.
ಇಲ್ಲಿನ ಕುಮಾರೇಶ್ವರ ಪಾಠಶಾಲೆಯ ಜಂಗಮವಟುಗಳು ಪೂಜಾ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಸಾಯಿಮಂದಿರ ಧರ್ಮಾಧಿಕಾರಿ ವೇ. ಮಂಜಯಸ್ವಾಮಿ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ದಾನಪ್ಪ ಮಾಸೂರು, ಉಮೇಶ ಸಂಕಣ್ಣನವರ, ಸದಸ್ಯ ಚಂದ್ರಪ್ಪ ಶೆಟ್ಟರ, ವಕೀಲ ಚಂದ್ರಪ್ಪ ಕಾರಗಿ, ಪ್ರಶಾಂತ ಯಾದವಾಡ, ವಿಜಯಲಕ್ಷ್ಮೀ ಯಾದವಾಡ, ಸಿದ್ದಲಿಂಗಪ್ಪ ಪಸಾರದ, ಈರಪ್ಪ ಸಂಕಣ್ಣನವರ, ರಾಜಣ್ಣ ತೊಪ್ಪಲದ, ಜಯಣ್ಣ ಪ್ಯಾಟಿ, ಮುತ್ತಣ್ಣ ಕೆಂಬಿ, ಶಿವಣ್ಣ ಶೆಟ್ಟರ, ಮಹಾಲಿಂಗಪ್ಪ ಶಿರೂರು, ಮಂಗಳಾ ಸಾತೇನಹಳ್ಳಿ, ಚೆನ್ನಪ್ಪ ಚನ್ನರಾಯಪಟ್ಟಣ, ಶಶಿಧರ ಗೊಲ್ಲರಹಳ್ಳಿಮಠ, ಪತ್ರಕರ್ತ ಕರಿಬಸಯ್ಯ ಹಿರೇಮಠ, ಕುಮಾರ ಕರ್ಚಡ, ಶಿವು ಕಲ್ಲಾಪುರ ಇತರರಿದ್ದರು.