ಮೂಡಲ್​ ಕುಣಿಗಲ್​ ಕೆರೆಗೆ ಗಂಗಾ ಆರತಿ

5
Published on

17 ಕೆರೆಗಳ ಏತ ನೀರಾವರಿ ಯೋಜನೆಗೆ ₹17 ಕೋಟಿ | ಮಾಜಿ ಸಂಸದ ಡಿ.ಕೆ.ಸುರೇಶ್​ ಭರವಸೆ

ವಿಜಯವಾಣಿ ಸುದ್ದಿಜಾಲ ಕುಣಿಗಲ್​
ತಾಲೂಕಿನ ಕೊತ್ತಗೆರೆ ಹೋಬಳಿಯ 17 ಕೆರೆಗಳಿಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ 17 ಕೋಟಿ ರೂ. ಅನುದಾನ ಬಿಡುಗಡೆಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ಅವರಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್​ ಭರವಸೆ ನೀಡಿದರು.


ಮೂಡಲ್​ ಕುಣಿಗಲ್​ ದೊಡ್ಡಕೆರೆ ಕೋಡಿ ಬಿದ್ದ ಹಿನ್ನಲೆಯಲ್ಲಿ ಶಾಸಕ ಡಾ.ಎಚ್​.ಡಿ.ರಂಗನಾಥ್​ ನೇತೃತ್ವದಲ್ಲಿ ಶುಕ್ರವಾರ ಕೆರೆಗೆ ಗಂಗಾ ಆರತಿ ಹಾಗೂ ಬಾಗಿನ ಅರ್ಪಿಸಿ ಮಾತನಾಡಿ, ನಾನು ಸಂಸದನಾಗಿದ್ದ ಅವಧಿಯಲ್ಲಿ ಕೊತ್ತಗೆರೆ ಹೋಬಳಿಯ 17 ಕೆರೆಗಳಿಗೆ ಹೇಮಾವತಿಯಿಂದ ನೀರು ತುಂಬಿಸುವ ಭರವಸೆ ನೀಡಿದ್ದೆ. ಚುನಾವಣೆಯಲ್ಲಿ ಸೋತಿದ್ದರೂ ಶಾಸಕ ಡಾ.ಎಚ್​.ಡಿ.ರಂಗನಾಥ್​ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರಿಗೆ ಮನವಿ ಸಲ್ಲಿಸಿ, 17 ಕೋಟಿ ರೂ. ಮಂಜೂರು ಮಾಡಿಸಿ, ಏತ ನೀರಾವರಿ ಯೋಜನೆ ಮೂಲಕ ಕೊತ್ತಗೆರೆ ಹೋಬಳಿ ವ್ಯಾಪ್ತಿಯ 17 ಕೆರೆಗಳನ್ನು ತುಂಬಿಸಲಾಗುವುದು ಎಂದು ಡಿ.ಕೆ.ಸುರೇಶ್​ ಭರವಸೆ ನೀಡಿದರು.


ಗಂಗಾ ಆರತಿಗೂ ಮುನ್ನ ನೂರಾರು ಮಹಿಳೆಯರು ಪೂರ್ಣಕುಂಭ ಮೆರವಣಿಗೆಯಲ್ಲಿ ಶಾಸಕ ಡಾ.ರಂಗನಾಥ್​, ಮಾಜಿ ಸಂಸದ ಡಿ.ಕೆ.ಸುರೇಶ್​ ಅವರನ್ನು ಕೆರೆ ಕೋಡಿ ಅಂಗಳಕ್ಕೆ ಕರೆ ತಂದರು. ಈ ವೇಳೆ ಹೇಮಾವತಿ ಎಇಇ ರವಿ, ಎಇ ಕಿರಣ್​, ಪುರಸಭೆ ಮುಖ್ಯಾಧಿಕಾರಿ ಜಿ.ಮಂಜುಳಾ, ಸದಸ್ಯರಾದ ರಂಗಸ್ವಾಮಿ, ಜಯಲಕ್ಷಿ$್ಮ ಬಿ.ಎನ್​.ಅರುಣ್​ಕುಮಾರ್​, ಮಂಜುಳಾ, ರೂಪಿಣಿ, ದೇವರಾಜು, ಎಸ್​.ಕೆ.ನಾಗೇಂದ್ರ, ಸಮಿವುಲ್ಲಾ ಮತ್ತಿತರರು ಇದ್ದರು.

ಹೇಮೆ ಲಿಂಕ್​ಕೆನಾಲ್​ ಕಾಮಗಾರಿ ಮತ್ತೆ ಆರಂಭ
ಕುಣಿಗಲ್​ ತಾಲೂಕಿಗೆ ವರದಾನವಾಗಿರುವ ಲಿಂಕ್​ಕೆನಾಲ್​ ಕಾಮಗಾರಿಗೆ ಕೆಲವರು ಅಡ್ಡಿ ಪಡಿಸಿದ್ದರಿಂದ ಸರ್ಕಾರ ತಾಂತ್ರಿಕ ಸಮಿತಿ ರಚಿಸಿತ್ತು. ಸಮಿತಿ ವರದಿ ನೀಡಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಕಾಮಗಾರಿಗೆ ಸೂಚನೆ ನೀಡಿದ್ದು, ಕಾಮಗಾರಿ ಕೈಗೆತ್ತಿಕೊಂಡು ಎರಡು ವರ್ಷದಲ್ಲಿ ತಾಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಡಿ.ಕೆ.ಸುರೇಶ್​ ತಿಳಿಸಿದರು.

ಕುಣಿಗಲ್​ ಅಭಿವೃದ್ಧಿಗೆ ಚಿಂತನೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಿರೀತ ಮಟ್ಟದಲ್ಲಿ ಮತಗಳು ಕಣಿಗಲ್​ ಕ್ಷೇತ್ರ ನೀಡಿಲ್ಲ. ಆದರೂ ತಾಲೂಕಿನ ಬಗ್ಗೆ ನನಗೆ ಕಾಳಜಿ ಇದೆ. ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಕುಣಿಗಲ್​, ರಾಮನಗರ ಸೇರಿ 6 ಕಡೆ ಜಾಗವನ್ನು ರಾಜ್ಯ ಸರ್ಕಾರ ಗುರುತಿಸಿದೆ. ಕುಣಿಗಲ್​ ಅಥವಾ ರಾಮನಗರದ ಯಾವುದಾದರೂ ಒಂದು ಕಡೆ ಅಂತಾರಾಷ್ಟ್ರೀಯ ನಿಲ್ದಾಣವಾದರೇ ಖುಷಿ ಪಡುವ ಮೊದಲಿಗ ನಾನಾಗುವೆ ಎಂದು ಡಿ.ಕೆ.ಸುರೇಶ್​ ಹೇಳಿದರು.

ಚನ್ನಪಟ್ಟಣ ಉಪಚುನಾವಣೆ ಮೈತ್ರಿ ನಿಲುವಿನ ಬಳಿಕ ತೀರ್ಮಾನ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್​, ಎನ್​ಡಿಎ ಮೈತ್ರಿ ತೀರ್ಮಾನ ಹೊಂದಿಕೆ ನೋಡಿಕೊಂಡು ಮೈತ್ರಿ ಅಭ್ಯರ್ಥಿಯ ನಿಲುವಿನ ಬಳಿಕ ಕಾಂಗ್ರೆಸ್​ನಿಂದ ಯಾರು ಸ್ಪರ್ಧೆ ಮಾಡಬೇಕೆಂಬ ಬಗ್ಗೆ ಪ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಸೌಂದರೀಕರಣಕ್ಕೆ ಒತ್ತು: ಪ್ರವಾಸಿಗರು ಹಾಗೂ ಈ ಭಾಗದ ಜನರಿಗೆ ಅನುಕೂಲವಾಗಲೆಂದು ಕೆರೆ ಕೋಡಿ ಭಾಗದ ರ್ನಿದಿಷ್ಟ ಜಾಗದಲ್ಲಿ ಕೆರೆ ಕೋಡಿ ಸೌಂದರೀಕರಣ ಕಾಮಗಾರಿ ಕೈಗೆತ್ತುಕೊಳ್ಳಲು ಯೋಜನಾ ವೆಚ್ಚವನ್ನು ತಯಾರಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಡಿ.ಕೆ.ಸು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net