ಬಯಲು ರಂಗಮಂದಿರ ನಿರ್ಮಾಣಕ್ಕೆ ಆದ್ಯತೆ: ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಹೇಳಿಕೆ

New Project (34)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಲಯನ್ಸ್ ಕ್ಲಬ್ ಮೂಡುಬಿದಿರೆ ಸುವರ್ಣ ಮಹೋತ್ಸವ ವರ್ಷದ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಮತ್ತು ಪದಾಧಿಕಾರಿಗಳ ಪದಗ್ರಹಣ ಜತೆಗೆ ಲಿಯೋ ಕ್ಲಬ್ ಅಧ್ಯಕ್ಷ ಪ್ರಖ್ಯಾತ್ ಹೆಗ್ಡೆ ಮತ್ತು ಪದಾಧಿಕಾರಿಗಳ ಪದಗ್ರಹಣ ಬುಧವಾರ ನಡೆಯಿತು. ಲಯನ್ಸ್ ಜಿಲ್ಲೆ 317ಡಿಯ ಪೂರ್ವ ರಾಜ್ಯಪಾಲ ವಸಂತಕುಮಾರ್ ಶೆಟ್ಟಿ ಪದಗ್ರಹಣ ನೆರವೇರಿಸಿದರು. ನಿರ್ಗಮನ ಅಧ್ಯಕ್ಷ ಬೊನವೆಂಚರ್ ಮಿನೇಜಸ್ ಅಧ್ಯಕ್ಷತೆ ವಹಿಸಿದರು.

ನೂತನ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಮಾತನಾಡಿ, ಲಯನ್ಸ್ ಪಾರ್ಕ್‌ನಲ್ಲಿ ಬಯಲು ರಂಗಮಂದಿರ ನಿರ್ಮಾಣ ಈ ವರ್ಷದ ಮೊದಲ ಆಧ್ಯತೆಯಾಗಿದೆ ಎಂದರು.

ಪೂರ್ವ ರಾಜ್ಯಪಾಲ ಮೆಲ್ವಿನ್ ಡಿಸೋಜ, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ನೂತನ ಪ್ರಾಂತೀಯ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ವಲಯಾಧ್ಯಕ್ಷ ಜೊಸ್ಸಿ ಮಿನೇಜಸ್, ಕ್ಲಬ್ ಪ್ರಥಮ ಮಹಿಳೆ ಶೋಭಾ ಎಸ್.ಹೆಗ್ಡೆ, ಕಾರ್ಯದರ್ಶಿ ವಿನೋದ್ ಡೇಸಾ, ಓಸ್ವಾಲ್ಡ್ ಡಿಕೋಸ್ತ, ಹರೀಶ್ ತಂತ್ರಿ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ, ಲಿಯೋಕ್ಲಬ್ ಅಧ್ಯಕ್ಷ ಪ್ರಖ್ಯಾತ್ ಹೆಗ್ಡೆ, ಪದಾಧಿಕಾರಿಗಳಾದ ಸ್ವಯಂ ಪೂಜಾರಿ, ಶಶಾಂಕ್, ಆಡೆಲ್ ಪ್ರಿನ್ಸಿಟಾ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.

ಸುಕೇಶ್ ಶೆಟ್ಟಿ ಎದಮೇರು, ವಿನಯ ಕುಮಾರ್ ಶೆಟ್ಟಿ ಸದಸ್ಯರಾಗಿ ಸೇರ್ಪಡೆಗೊಂಡರು. ಮಾರ್ಕ್ ಮೆಂಡೋನ್ಸಾ ನೂತನ ಸದಸ್ಯರನ್ನು ಪರಿಚಯಿಸಿದರು. ಪದಗ್ರಹಣ ಅಧಿಕಾರಿಯವರನ್ನು ಆಂಡ್ರೊೃ ಡಿಸೋಜ, ನೂತನ ಲಯನ್ಸ್ ಪದಾಧಿಕಾರಿಗಳನ್ನು ವಲೇರಿಯನ್ ಸಿಕ್ವೇರಾ ಹಾಗೂ ನೂತನ ಲಿಯೋ ಪದಾಧಿಕಾರಿಗಳನ್ನು ಆಡೆಲ್ ಪ್ರಿನ್ಸಿಟಾ ಮಿನೇಜಸ್ ಪರಿಚಯಿಸಿದರು.

ವಿನೋದ್ ಡೇಸಾ ಸನ್ಮಾನ ಪತ್ರ ವಾಚಿಸಿದರು. ವಿನೋದ್ ಕುಮಾರ್ ನಿರೂಪಿಸಿದರು. ಓಸ್ವಾಲ್ಡ್ ಡಿಕೋಸ್ತ ವಂದಿಸಿದರು.

ಸೇವಾ ಚಟುವಟಿಕೆ

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಉಜ್ವಲ, ಕ್ರಿಶಾಲ, ತಿಲಕ್, ಚೈತ್ರ ಅವರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶ್ರೇಯಾ, ಶ್ರಾವ್ಯ ಅವರಿಗೆ ಶೈಕ್ಷಣಿಕ ಧನ ಸಹಾಯ ನೀಡಲಾಯಿತು. ಅತಿಥಿ ಶಿಕ್ಷಕರಿಗೆ ಗೌರವಧನ, ಅನಾರೋಗ್ಯ ಪೀಡಿತರಿಗೆ ಆರ್ಥಿಕ ನೆರವು, ಅಲಂಗಾರಿನ ಮೌಂಟ್ ರೋಸರಿ ವೃದ್ಧಾಶ್ರಮದ ಮಹಿಳಾ ವಿಭಾಗದ ಕಟ್ಟಡ ನಿರ್ಮಾಣಕ್ಕಾಗಿ ವೆಂಕಟೇಶ ಪ್ರಭು ಪ್ರಾಯೋಜಿಸಿರುವ 1 ಲಕ್ಷ ರೂ. ಧನಸಹಾ ಮತ್ತು ಜೋಸ್ಸಿ ಮಿನೇಜಸ್ ಪ್ರಾಯೋಜಿಸಿರುವ 50 ಸಾವಿರ ರೂ. ಧನಸಹಾಯ ಹಸ್ತಾಂತರಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿರುವ ಎಕ್ಸಲೆಂಟ್ ಪಿ.ಯು. ಕಾಲೇಜಿನ ಶಿಶಿರ್ ಎಚ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net