ತುಳುವೇಶ್ವರ ದೇವಸ್ಥಾನಕ್ಕೆ ಮೂಡುಬಿದಿರೆ ಜೈನ ಮಠ ಸ್ವಾಮೀಜಿ ಭೇಟಿ

gan (9)
Published on

ಕುಂದಾಪುರ: ಬಸ್ರೂರಿನ ಪುರಾತನ ತುಳುವೇಶ್ವರ ದೇವಸ್ಥಾನಕ್ಕೆ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಭೇಟಿ ನೀಡಿದರು. ತುಳುವೇಶ್ವರನ ದರ್ಶನ ಪಡೆದ ಸ್ವಾಮೀಜಿ ಹೂವು ಹಣ್ಣು ಕಾಯಿ ಸಮರ್ಪಿಸಿದರು. ಇಲ್ಲಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಳುವೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನೆ ಚಿಂತನೆ ಸ್ಥಳಕ್ಕೆ ಭೇಟಿ ನೀಡಿದ ಸ್ವಾಮೀಜಿ, ತುಳುವೇಶ್ವರನ ಭಕ್ತರೆಲ್ಲರೂ ಈ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ತುಳುವೇಶ್ವರನ ದೇವಾಲಯ ಜೀರ್ಣೋದ್ಧಾರವಾಗಿ ಭಕ್ತರಿಗೆ ದರ್ಶನ ನೀಡುವಂತಾಗಲಿ ಎಂದು ಆಶೀರ್ವದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net