ಸೌತಡ್ಕ ಕ್ಷೇತ್ರದಲ್ಲಿ ಮೂಡಪ್ಪ ಸೇವೆ

Southadka moodappa seve
Published on

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಸೋಮವಾರ ಬೆಳಗ್ಗೆ ಧಾರ್ಮಿಕ ವಿಧಿವಿಧಾನಗಳು, 108 ಕಾಯಿ ಗಣಪತಿ ಹೋಮ ಹಾಗೂ ಮೂಡಪ್ಪ ಸೇವೆ ನೆರವೇರಿತು.

ರಾತ್ರಿ 7ರಿಂದ ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸಭಕ್ತಿ ಗಾನಾಮೃತ ಕಾರ್ಯಕ್ರಮ ನಡೆಯಿತು. 9ರಿಂದ ಶ್ರೀ ಮಹಾಗಣಪತಿ ದೇವರಿಗೆ ಮೂಡಪ್ಪ ಸೇವೆ, 9.30ರಿಂದ ನೇರಳಕಟ್ಟೆ ಶ್ರೀ ಪಾಂಚಜನ್ಯ ಯಕ್ಷಗಾನ ಕಲಾತಂಡದಿಂದ ಬಯಲಾಟ ನಡೆಯಿತು. ಆಡಳಿತಾಧಿಕಾರಿ ಮಹೇಶ್ ಜೆ., ಕಾರ್ಯನಿರ್ವಹಣಾಧಿಕಾರಿ ಪಾವಡಪ್ಪ ದೊಡಮನಿ, ಅರ್ಚಕರು, ಸಿಬ್ಬಂದಿ ವರ್ಗ ಹಾಗೂ ಸಾವಿರಾರು ಮಂದಿ ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net