ಹೊಸತನದತ್ತ ಚಿತ್ತ ಸಮಾಜ ಏಳಿಗೆಯತ್ತ

samar
ನಾವುಂದ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾದ ಸಮರ್ ಶೆಟ್ಟಿ ಅವರಿಗೆ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎನ್.ಎಂ. ಹೆಗ್ಡೆ ಪದಪ್ರದಾನಿಸಿದರು
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಪ್ರತಿಯೊಬ್ಬ ಸದಸ್ಯರೂ ಸಮಾನ ಮನಸ್ಕರಾಗಿ ಸಂಸ್ಥೆಯ ಏಳಿಗೆಗೆ ದುಡಿಯಬೇಕು. ಸಾಮಾಜಿಕ ಕಳಕಳಿ ಬಗ್ಗೆ ಗಮನ ನೀಡುತ್ತಾ ಸಮಾಜಕ್ಕೆ ಅಗತ್ಯ ಯೋಜನೆಗಳನ್ನು ಹಮ್ಮಿಕೊಂಡು ಹೊಸತನ ನೀಡಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎನ್.ಎಂ ಹೆಗ್ಡೆ ಹೇಳಿದರು.
ನಾವುಂದ ಲಯನ್ಸ್ ಕ್ಲಬ್‌ನ 2024-25ನೇ ಸಾಲಿನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು.

ಸಮರ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸಾಮಾಜಿಕ ಸೇವೆಯಲ್ಲಿ ಸಿಗುವ ಖುಷಿ ಬೇರೊಂದಿಲ್ಲ. ನೀವೆಲ್ಲರೂ ನನಗೆ ಅಧ್ಯಕ್ಷ ಸ್ಥಾನ ನೀಡಿ ಸಮಾಜಸೇವೆ ಮಾಡುವ ಅವಕಾಶ ನೀಡಿದ್ದೀರಿ. ನಿಮ್ಮ ಭರವಸೆ ಉಳಿಸಿಕೊಳ್ಳುವಲ್ಲಿ ತಂಡದೊಂದಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಘಟಕದ ಯೋಜನೆಗಳನ್ನು ಸಫಲಗೊಳಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ ಎಂದರು.

ನಾಲ್ಕು ಹೊಸ ಸದಸ್ಯರು ಕ್ಲಬ್ಬಿಗೆ ಸೇರ್ಪಡೆಗೊಂಡರು. ಲಯನ್ಸ್ ಜಿಲ್ಲಾ ದ್ವಿತೀಯ ಉಪ ಗವರ್ನರ್ ರಾಜೀವ ಕೋಟ್ಯಾನ್, ವಲಯಾಧ್ಯಕ್ಷ ಗಿರೀಶ ಶಾನುಭಾಗ್, ಪೂರ್ವ ವಲಯಾಧ್ಯಕ್ಷ ವಿಶ್ವನಾಥ್ ಶೆಟ್ಟಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಕುದ್ರುಕೋಡು ಜಗದೀಶ ಶೆಟ್ಟಿ, ಕಾರ್ಯದರ್ಶಿ ನರಸಿಂಹ ದೇವಾಡಿಗ, ಜಿಲ್ಲಾ ರಾಯಭಾರಿ ಅರುಣ್ ಕುಮಾರ್ ಹೆಗ್ಡೆ, ರಮೇಶ್ ಮೊಗವೀರ, ಅಶೋಕ್ ಅಚಾರ್ಯ ಉಪಸ್ಥಿತರಿದ್ದರು. ಪ್ರದೀಪ್ ಶೆಟ್ಟಿ ಸ್ವಾಗತಿಸಿದರು. ರಾಜು ಬಿ. ದೇವಾಡಿಗ ವಂದಿಸಿದರು. ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ, ಪ್ರತಿಭಾ ಪುರಸ್ಕಾರ

ವೈದ್ಯಕೀಯ ಸೇವೆಯಲ್ಲಿ ಸಾಧನೆ ಗುರುತಿಸಿ ಡಾ.ಪಜ್ವಲ್, ಸರ್ಕಾರಿ ಸೇವೆಯನ್ನು ಗುರುತಿಸಿ ಮಂಜುನಾಥ ದೇವಾಡಿಗ ಅವರನ್ನು ಅಭಿನಂದಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿಯಲ್ಲಿ ಪಥಮ ರ‌್ಯಾಂಕ್ ಪಡೆದ ಲಾವಣ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net