ಶಿರೋಳ ಗವಿಮಠದಲ್ಲಿ ಮಾಸಿಕ ಶಿವಾನುಭವ ಗೋಷ್ಠಿ

13 SHIROL 1
Published on

ಶಿರೋಳ: ಗ್ರಾಮದ ಜಗದ್ಗುರು ಶ್ರೀ ಯಚ್ಚರಸ್ವಾಮಿ ಗವಿಮಠದಲ್ಲಿ 14ರಂದು ಸಂಜೆ 6.30ಕ್ಕೆ 17ನೇ ಶಿವಾನುಭವ ಗೋಷ್ಠಿ, ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಶ್ರೀ ಯಚ್ಚರಸ್ವಾಮಿ ಗವಿಮಠದ ಅಭಿನವ ಯಚ್ಚರಸ್ವಾಮೀಜಿ ವಹಿಸುವರು, ಮಾತೃ ದೇವೂಭವ ಎಂಬ ವಿಷಯ ಕುರಿತು ಬೀಳಗಿ ಕ್ರಾಸ್‌ನ ಜ್ಞಾನಸಿದ್ಧಾಶ್ರಮದ ಶ್ರೀ ಜ್ಞಾನಾನಂದ ಶರಣರು ಪ್ರವಚನ ನೀಡುವರು. ಮುಖ್ಯ ಅತಿಥಿಗಳಾಗಿ ಶಿರೋಳ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕರಾದ ಶೋಭಾ ಕುಬಕಡ್ಡಿ, ಶಿಕ್ಷಕಿಯರಾದ ಇ.ಎಂ. ನದಾಫ್, ಆರ್. ಸುಮಿತ್ರಾ, ಜಿ.ಬಿ. ಚಿಕ್ಕಣ್ಣವರ, ಎಸ್.ಪಿ. ಅಂಬೋರೆ, ಎಂ.ಎಚ್. ಶಾಂತಪ್ಪನವರ, ರೇಣುಕಾ ಬ್ಯಾಡಗಿ ಭಾಗವಹಿಸಲಿದ್ದಾರೆ. ಶಿವಾನುಭವ ಸೇವೆಯನ್ನು ದೇವೇಂದ್ರಾಚಾರ ಬಡಿಗೇರ, ಸಂಗೀತ ಸೇವೆಯನ್ನು ಬಸವರಾಜ ಕುಪ್ಪಸ್ತ, ಪಾಡುರಂಗ ಪತ್ತಾರ ತಬಲಾ ಸಾಥ್ ನೀಡಲಿದ್ದಾರೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net