

ಕಡಬ: ಶೌರ್ಯ ಘಟಕದ ಸ್ವಯಂಸೇವಕರು ಸಾಮಾಜಿಕ ಸೇವೆ ಹಾಗೂ ವಿಪತ್ತು ಸೇವೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಜನರಲ್ಲಿ ವಿಪತ್ತಿನ ಬಗ್ಗೆ ಭಯ ದೂರವಾಗುವುದು ಮತ್ತು ಭರವಸೆ ಮೂಡಿಸಲು ಸಹಕಾರಿಯಾಗುವುದು. ಸ್ವಯಂಸೇವಕರಲ್ಲಿ ಯೋಜನೆಯ ಪ್ರಗತಿಬಂಧು ಕಾರ್ಯಕ್ರಮಗಳ ಸಂಪೂರ್ಣ ತಿಳುವಳಿಕೆ ಅಗತ್ಯವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಬಿಳಿನೆಲೆ ವಲಯ ಕಚೇರಿಯಲ್ಲಿ ನಡೆದ ಮರ್ಧಾಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಘಟಕ ಪ್ರತಿನಿಧಿ ಭವಾನಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ವಲಯಾಧ್ಯಕ್ಷ ಸಂತೋಷ್ ಕೇನ್ಯ ಉಪಸ್ಥಿತರಿದ್ದರು. ಘಟಕ ಸಂಯೋಜಕಿ ಜ್ಞಾನಶೇಲ್ವಿ ಸ್ವಾಗತಿಸಿದರು. ಘಟಕದ ಸ್ವಯಂಸೇವಕ ವಿನಯ್ ಕುಮಾರ್ ವಂದಿಸಿದರು.