ಹಿರಿಯ ನಾಗರಿಕರ ಮಾಸಿಕ ಸಭೆ

Monthly meeting of senior citizens
ವಿಜಯಪುರದ ವಿರಶೈವ ಲಿಂಗಾಯತ ಸಭಾಭವನದಲ್ಲಿ ಹಿರಿಯ ನಾಗರಿಕರ ಮಾಸಿಕ ಸಭೆ ನಡೆಯಿತು. ಜಿ.ಆರ್. ಕುಲಕರ್ಣಿ, ಲಿಂಗಣ್ಣ ಕಲಬುರ್ಗಿ, ಸುಭಾಸ ಯಾದವಾಡ ಮತ್ತಿತರರಿದ್ದಾರೆ.
Published on

ವಿಜಯಪುರ: ಮಹಾಭಾರತ ವಿಶ್ವದ ಅತಿದೊಡ್ಡ ಮಹಾಕಾವ್ಯ. ಭಗವದ್ಗೀತೆ ಅದರಲ್ಲಿನ ಒಂದು ಸಣ್ಣಭಾಗ. ಪ್ರತಿಯೊಬ್ಬರಿಗೂ ಜೀವನ ವಿಧಾನ ಬೋಧಿಸುವಲ್ಲಿ ಭಗವದ್ಗೀತೆ ಮುಖ್ಯಭಾಗವಾಗಿದೆ.

ಅದರಲ್ಲಿ ಜೀವನ ಸಾಗರ ದಾಟುವ ಸಣ್ಣಸಣ್ಣ ಸುಂದರ ಸೂತ್ರಗಳಿವೆ ಎಂದು ನಿವೃತ್ತ ಪ್ರಾಚಾರ್ಯ ಜಿ.ಆರ್. ಕುಲಕರ್ಣಿ ಹೇಳಿದರು.

ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಶುಕ್ರವಾರ ನಡೆದ ರೋಟರಿ ಪ್ರೋಬಸ್ ಕ್ಲಬ್‌ನ ಹಿರಿಯ ನಾಗರಿಕರ ವೇದಿಕೆಯ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

ಉಪನ್ಯಾಸಕ ಶರಣಪ್ಪ ಹುಂಡೇಕಾರ ಆದಾಯಕರ ಪಾವತಿ, ಅದರಲ್ಲಿನ ವಿನಾಯತಿಗಳು, ಸೆಸ್, ರಿಬೇಟ್‌ಗಳ ಕುರಿತ ಮಾಹಿತಿ ನೀಡಿದರು.

ನ್ಯೂಜಿಲ್ಯಾಂಡ್ ದೇಶದ ಬಸವ ಬಳಗದ ಅಧ್ಯಕ್ಷ ಲಿಂಗಣ್ಣ ಕಲಬುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಸುಭಾಸ ಯಾದವಾಡ ಅಧ್ಯಕ್ಷತೆ ವಹಿಸಿದ್ದರು. ಹೊಸದಾಗಿ ವೇದಿಕೆಗೆ ಆಗಮಿಸಿದ ಹಿರಿಯ ನಾಗರಿಕರಿಗೆ ಮತ್ತು ಮಾರ್ಚ್ ತಿಂಗಳಲ್ಲಿ ಹುಟ್ಟಿದ ಹಿರಿಯ ನಾಗರಿಕರಿಗೆ ಪುಷ್ಟಗುಚ್ಚ ನೀಡಿ ಗೌರವಿಸಲಾಯಿತು.

ಬಿ.ಎಸ್. ಸಜ್ಜನ ಪ್ರಾರ್ಥಿಸಿದರು. ಮಹಾದೇವ ಪರಿಚಯಿಸಿದರು. ಜಗದೀಶ ಮೋಟಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net