ಮುಂಡರಗಿ: ಪಟ್ಟಣದ ಶಾಸಕರ ಮಾದರಿ ಕೇಂದ್ರ ಶಾಲೆ(ಎಂ.ಸಿ.ಎಸ್.)ಯಲ್ಲಿ ಮಾ. 15ರಂದು ಬೆಳಗ್ಗೆ 12.45ಗಂಟೆಗೆ ರಾಜ್ಯ ನಿವೃತ್ತ ಸರ್ಕಾರಿ ನೌಕರರು ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವಿಶೇಷ ಮಾಸಿಕ ಸಭೆ ಕರೆಯಲಾಗಿದೆ. ಸಂಘದ ತಾಲೂಕಾಧ್ಯಕ್ಷ ಆರ್.ಬಿ. ಹಕ್ಕಂಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುರಸಭೆಯಿಂದ ಸಂಘಕ್ಕೆ ನಿವೇಶನ ಪಡೆಯುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಎಸ್.ಡಿ. ಗಡೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.