

ಕಾರ್ಕಳ: ಇಲ್ಲಿನ ಸಾಹಿತ್ಯ ಸಂಘ ಮಾಸಿಕ ವಿಶೇಷ ಉಪನ್ಯಾಸ ಕಾರ್ಕಳದ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ನಡೆಯಿತು.
ಸುಳ್ಯ ಎನ್‌ಎಂಸಿಯ ವಿಶ್ರಾಂತ ಪ್ರಾಚಾರ್ಯ ಡಾ. ಪೂವಪ್ಪ ಕಣಿಯೂರು ನಾಗಾರಾಧನೆ ಜನಪದ ದೃಷ್ಟಿಕೋನ ಬಗ್ಗೆ ಮಾತನಾಡಿದರು. ಕಾರ್ಯಾಧ್ಯಕ್ಷ ಕೆ.ಪಿ ಶೆಣೈ ಪ್ರಸ್ತಾವನೆಗೈದರು. ಕೋಶಾಧಿಕಾರಿ ಎಸ್.ನಿತ್ಯಾನಂದ ಪೈ ಇದ್ದರು. ಡಾ.ನಿರಂಜನ್ ಚಿಪ್ಲೊಂಕರ್ ಅತಿಥಿಗಳಿಗೆ ಸ್ಮರಣಿಕೆ ನೀಡಿದರು. ವೈ.ಅನಂತಪದ್ಮನಾಭ ಭಟ್ ಸಹಕರಿಸಿದರು. ಕಾರ್ಯದರ್ಶಿ ಬಿ.ಕೆ .ಈಶ್ವರ ಮಂಗಲ ವಂದಿಸಿದರು. ಕೆ.ಕೆ ನಂಬಿಯಾರ್ ನಿರೂಪಿಸಿದರು.