ಆರ್ಥಿಕ ಸಬಲೀಕರಣಕ್ಕೆ ಮಾಸಿಕ ಸಂತೆ ಸಹಕಾರಿ

ಸಂಡೂರು ಸಮೀಪದ ತಾರಾನಗರದಲ್ಲಿ ಆಯೋಜಿಸಿದ್ದ ಸಂಜೀವಿನಿ ಕಿರು ಉದ್ದಿಮೆದಾರರ ಮಾಸಿಕ ಸಂತೆಯನ್ನು ಜಿಪಂ ಸಿಇಒ ಮಹಮದ್ ಹ್ಯಾರೀಸ್ ಸುಮೇರ್ ವೀಕ್ಷಿಸಿದರು. ಜಿಪಂ ಯೋಜನಾ ನಿರ್ದೇಶಕ ಭೀಮಪ್ಪ ಲಾಳಿ, ಮನರೇಗಾ ಯೋಜನೆ ಎಡಿ ಬಿ.ಎಂ.ರೇಣುಕಾಚಾರ್ಯ ಸ್ವಾಮಿ, ಗ್ರಾಪಂ ಅಧ್ಯಕ್ಷೆ ಹರಗಿಣದೋಣಿ ನಿಂಗಮ್ಮ ಇತರರಿದ್ದರು.
ಸಂಡೂರು ಸಮೀಪದ ತಾರಾನಗರದಲ್ಲಿ ಆಯೋಜಿಸಿದ್ದ ಸಂಜೀವಿನಿ ಕಿರು ಉದ್ದಿಮೆದಾರರ ಮಾಸಿಕ ಸಂತೆಯನ್ನು ಜಿಪಂ ಸಿಇಒ ಮಹಮದ್ ಹ್ಯಾರೀಸ್ ಸುಮೇರ್ ವೀಕ್ಷಿಸಿದರು. ಜಿಪಂ ಯೋಜನಾ ನಿರ್ದೇಶಕ ಭೀಮಪ್ಪ ಲಾಳಿ, ಮನರೇಗಾ ಯೋಜನೆ ಎಡಿ ಬಿ.ಎಂ.ರೇಣುಕಾಚಾರ್ಯ ಸ್ವಾಮಿ, ಗ್ರಾಪಂ ಅಧ್ಯಕ್ಷೆ ಹರಗಿಣದೋಣಿ ನಿಂಗಮ್ಮ ಇತರರಿದ್ದರು.
Published on

ಸಂಡೂರು: ಸಂಜೀವಿನಿ ಯೋಜನೆಯಡಿ ಮಹಿಳೆಯರು ಸಾಮಾಜಿಕ, ಆರ್ಥಿಕ ಸಬಲೀಕರಣಕ್ಕೆ ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ಜೀವನೋಪಾಯ ಕಂಡುಕೊಳ್ಳಬಹುದು ಎಂದು ಜಿಪಂ ಸಿಇಒ ಮಹಮದ್ ಹ್ಯಾರಿಸ್ ಸುಮೇರ್ ಹೇಳಿದರು.

ತಾಲೂಕಿನ ತಾರಾನಗರದಲ್ಲಿ ಸಂಜೀವಿನಿ-ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಪಂ, ತಾಪಂ ಹಾಗೂ ಗ್ರಾಪಂ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಜೀವಿನಿ ಮಾಸಿಕ ಸಂತೆ ಮತ್ತು ಘನ ತ್ಯಾಜ್ಯ ವಿಲೇವಾರಿ ಬಳಕೆದಾರರ ಸೇವಾ ಶುಲ್ಕ ಸಂಗ್ರಹಣಾ ಅಭಿಯಾನದಲ್ಲಿ ಮಾತನಾಡಿದರು.

ಮಹಿಳಾ ಕಿರು ಉದ್ಯಮದಾರರಿಗೆ ಸ್ಥಳೀಯ ಮಾರುಕಟ್ಟೆ ಸೌಲಭ್ಯ ಕಲ್ಪಿಸಿ ಆರ್ಥಿಕ ಸಬಲರನ್ನಾಗಿಸಲು ಹಾಗೂ ಪ್ರೇರೇಪಿಸಲು ಸಂಜೀವಿನಿ ಮಾಸಿಕ ಸಂತೆ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಸಂಜೀವಿನಿ ಸ್ವಸಹಾಯ ಗುಂಪುಗಳು ಹಾಗೂ ಗ್ರಾಪಂ ಮಟ್ಟದ ಗುಂಪುಗಳ ಮಧ್ಯೆ ಒಪ್ಪಂದ ಮಾಡಿಕೊಂಡು ಮಹಿಳೆಯರಿಂದ ಘನ ತ್ಯಾಜ್ಯ ವಿಲೇವಾರಿ ನಿರ್ವಹಿಸಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಸೇವಾ ಶುಲ್ಕ ಪಾವತಿಸಿ ಗ್ರಾಮದ ಸ್ಪಚ್ಛತೆ ಕಾಪಾಡಲು ಸಹಕರಿಸಬೇಕು ಎಂದರು. ಅಧಿಕಾರಿಗಳೊಂದಿಗೆ ಮನೆ ಮನೆಗೆ ತೆರಳಿ ಸ್ವಚ್ಛತಾ ಸೇವಾ ಶುಲ್ಕ ಸಂಗ್ರಹಣಾ ಅಭಿಯಾನ ಆರಂಭಿಸಿದರು. ಪ್ರತಿ ಮನೆಗೆ ತಿಂಗಳಿಗೆ 30ರೂ., ಅಂಗಡಿ, ಹೋಟೆಲ್‌ಗಳಿಗೆ 50ರೂ. ಸೇವಾ ಶುಲ್ಕ ಸಂಗ್ರಹಿಸುವಂತೆ ತಿಳಿಸಿದರು.

ಜಿಪಂ ಯೋಜನಾ ನಿರ್ದೇಶಕ ಭೀಮಪ್ಪ ಲಾಳಿ, ಮನರೇಗಾ ಯೋಜನೆ ಎಡಿ ಬಿ.ಎಂ.ರೇಣುಕಾಚಾರ್ಯ ಸ್ವಾಮಿ, ಗ್ರಾಪಂ ಅಧ್ಯಕ್ಷೆ ಹರಗಿಣದೋಣಿ ನಿಂಗಮ್ಮ, ಸದಸ್ಯರಾದ ಎರ‌್ರಿಸ್ವಾಮಿ, ಅಂಬಮ್ಮ, ಈರಮ್ಮ, ತಾಲೂಕು ಯೋಜನಾಧಿಕಾರಿ ವಸಂತಕುಮಾರ್, ಎಸ್‌ಬಿಎಂ ಸಂಯೋಜಕ ಕಿರಣ್, ಸಂಜೀವಿನಿ ಯೋಜನೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸೋಮಶೇಖರ್, ಪಿಡಿಒ ಪ್ರಭುವನ ಗೌಡ, ಗ್ರಾಪಂ ಸಿಬ್ಬಂದಿ ಸುರೇಶ, ವೆಂಕಟೇಶ, ಯಶೋದಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net