ಮೊಂತಿ ಫೆಸ್ಟ್ ಸರಳ ಆಚರಣೆ

church
Published on

ಉಡುಪಿ: ತೆನೆ ಹಬ್ಬ ಹಾಗೂ ಕನ್ಯಾ ಮರಿಯಮ್ಮನವರ ಜನ್ಮದಿನ (ಮೊಂತಿ ಫೆಸ್ಟ್) ಅನ್ನು ಜಿಲ್ಲಾದ್ಯಂತ ಮಂಗಳವಾರ ಸರಳವಾಗಿ ಆಚರಿಸಲಾಯಿತು. ಉಡುಪಿ ಧರ್ಮಪ್ರಾಂತ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಶೋಕಮಾತಾ ಇಗರ್ಜಿಯಲ್ಲಿ ಹೊಸ ತೆನೆಗಳನ್ನು ಪೂಜಿಸಿ, ಬಲಿಪೂಜೆ ನೆರವೇರಿಸಿದರು.

ಭಕ್ತರು ದೈಹಿಕ ಅಂತರ ಕಾಪಾಡಿಕೊಂಡು ಬಲಿಪೂಜೆಯಲ್ಲಿ ಭಾಗವಹಿಸಿದರು. ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಹೊಸ ಭತ್ತದ ತೆನೆಯನ್ನು ವಾಳೆಯ ಗುರಿಕಾರರು ಮತ್ತು ಪ್ರತಿನಿಧಿಗಳ ಮೂಲಕ ನೀಡಿ ಹರಸಿದರು. ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳ ಸಮರ್ಪಣೆ ಹಾಗೂ ಮೆರವಣಿಗೆ ರದ್ದು ಮಾಡಲಾಗಿತ್ತು.

ಜಾರಿಗೆಕಟ್ಟೆ ಚರ್ಚ್‌ನಲ್ಲಿ ಹಬ್ಬ: ಕ್ರೈಸ್ತರ ತೆನೆ ಹಬ್ಬವನ್ನು ಮುಂಡ್ಕೂರು -ಜಾರಿಗೆಕಟ್ಟೆ ಫಾತಿಮಾ ಚರ್ಚ್‌ನಲ್ಲಿ ಮಂಗಳವಾರ ಸರಳವಾಗಿ ಆಚರಿಸಲಾಯಿತು. ಧರ್ಮಗುರು ರೊಸಾರಿಯೊ ಫರ್ನಾಂಡಿಸ್ ಧಾರ್ಮಿಕ ವಿಧಿ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net