

ರಾಯಚೂರು ಮುನ್ನೂರು ಕಾಪು ಸಮಾಜದಿಂದ ಕಾರ ಹುಣ್ಣಿಮೆ ನಿಮಿತ್ತ ಜೂ.5 ರಿಂದ 12 ರವರೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆಂದು ಹಬ್ಬದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 25 ವರ್ಷಗಳಿಂದ ಪ್ರತಿವರ್ಷಗಳಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಬಾರಿಯು ಭಾರದ ಕಲ್ಲುಎಳೆಯುವ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯ ಕ್ರಮಗಳು ಜರುಗಲಿವೆ. ಜೂ.5 ರಂದು ಸದ್ಭಾವನಾ ಓಟ ಕಾರ್ಯಕ್ರಮ ನಡೆಯಲಿದೆ. ಅಂದು ವೀರಾಂಜನೇಯ್ಯ ಕಲ್ಯಾಣಮಂಪಟದಿಂದ ಪ್ರಾರಂಭವಾಗಿ ಶ್ರೀ ಮಾತಾ ಲಕ್ಷ್ಮಮ್ಮದೇವಿ ದೇವಸ್ಥಾನವರೆಗೆ ನಡೆಯಲಿದೆ.
ಅಂದು ಸಂಜೆ ಕವಿಗೋಷ್ಟಿ ನಡೆಯಲಿದೆ. ಜೂ.6 ರಂದು ರಂಗೋಲಿ ಸ್ಪರ್ಧೆ, ಸಂಜೆ ಚಿತ್ರಕಲಾ ಸ್ಪರ್ಧೆಗಳು ನಡೆಯಲಿವೆ. ಜೂ.7 ರಂದು ಸಂಜೆ ಎಲ್ಲಾ ಸಮಾಜದಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. 57 ಜನ ಸಾಧಕರು, ಸಾಹಿತಿಗಳು, ವೈಧ್ಯರು ಸೇರಿದಂತೆ ಅನೇಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಕಾರ್ಯಕ್ರಮವನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಉದ್ಘಾಟಿಸಲಿದ್ದಾರೆ. ಜೂ.8 ರಿಂದ 12ರವರೆ ಮುಂಗಾರು ಸಾಂಸ್ಕೃತಿಕ ಹಬ್ಬದ ನಿಮಿತ್ತ ಸಂಜೆ ಬಸವೇಶ್ವರ ಕಾಲೋನಿ, ಐಡಿಎಸ್‌ಎಂಟಿ ಲೆಔಟ್, ಶಾರದಾ ವಿದ್ಯಾನೀಕೇತನ ಶಾಲೆ, ಶ್ರೀ ವೀರಾಂಜನೇಯ ಕಲ್ಯಾಣ ಮಂಟಪದಲ್ಲಿ ಗಂಜ ಕಲ್ಯಾಣ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಅದರಂತೆ ಜೂ.10 ರಿಂದ ಮೂರು ದಿನ ಭಾರದ ಕಲ್ಲೇಳೆಯುವ ಸ್ಪರ್ಧೆ ಪ್ರಾರಂಭವಾಗಲಿದೆ. ಎಪಿಎಂಸಿ ಆವರಣದಲ್ಲಿ ಒಂದುವರೆ ಟನ್ ಭಾರದ ಕಲ್ಲೇಳೆಯುವ ಸ್ಪರ್ಧೇಯಲ್ಲಿ ಪ್ರಥಮ ಬಹುಮಾನ ಪಡೆಯುವ ಎತ್ತುಗಳ ಜೋಡಿಗೆ 75 ಸಾವಿರ ರೂ, ದ್ವಿತೀಯ ಬಹುಮಾನ 55 ಸಾವಿರ ರೂ, ತೃತೀಯ ಬಹುಮಾನ 45 ಸಾವಿರ ರೂ, ಬಹುಮಾನ ನೀಡಲಾಗುತ್ತದೆ. ಕಾರ್ಯಕ್ರಮವನ್ನು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಲಿದ್ದಾರೆ.ಜೂ.11 ರಂದು 2 ಟನ್ ಭಾರತ ಕಲ್ಲೇಳೆಯುವ ಸ್ಪರ್ಧೆ ಅಖಿಲ ಭಾರತ ಮುಕ್ತವಾಗಿ ನಡೆಯಲಿದೆ. ಪ್ರಥಮ ಬಹುಮಾನವಾಗಿ 90 ಸಾವಿರ ರೂ, ದ್ವಿತೀಯ ಬಹುಮಾನವಾಗಿ 65ಸಾವಿರ ರೂ, ತೃತೀಯ ಬಹುಮಾನವಾಗಿ 55 ಸಾವಿರ ರೂ, ನೀಡಲಾಗುತ್ತದೆ. ಶ್ರೀ ಕಾಶಿ ಜಗದ್ಗರುಗಳು ಹಾಗೂ ಸುತ್ತೂರು ಶ್ರೀಗಳ ಭವ್ಯ ಮೆರವಣಿಗೆ ನಡೆಯಲಿದೆ. ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಅನೇಕ ಸಚಿವರುಗಳು,ಶಾಸಕರುಗಳು ಭಾಗವಹಿಸಲಿದ್ದಾರೆ.
ಜೂ.12 ರಂದು 2.5 ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಅಂತರಾಜ್ಯಗಳ ಭಾಗವಹಿಸುವಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಮೊದಲ ಬಹುಮಾನ 1 ಲಕ್ಷ ರೂ, ಎರಡನೇ ಬಹುಮಾನವಾಗಿ 75 ಸಾವಿರರೂ, ತೃತೀಯ ಬಹುಮಾನವಾಗಿ 65 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಕಾರ್ಯಕ್ರಮವನ್ನು ತೆಲಂಗಾಣ ಸಿಎಂ ರೇವಂತರೆಡ್ಡಿ ಉದ್ಘಾಟಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಕೃಷ್ಣಮೂರ್ತಿ, ಜಿ.ಬಸವರಾಜರೆಡ್ಡಿ, ಎನ್.ಶ್ರೀನಿವಾಸರೆಡ್ಡಿ, ಬಂಗಿ ನರಸರೆಡ್ಡಿ ,ಎನ್.ಶೇಖರರೆಡ್ಡಿ, ಎನ್.ಶ್ರೀನಿವಾಸರೆಡ್ಡಿ, ಯು.ಗೋವಿಂದರೆಡ್ಡಿ, ಗುಡ್ಡಿ ನರಸರೆಡ್ಡಿ, ಕೆ.ವೆಂಕಟರೆಡ್ಡಿ ಇದ್ದರು.