ಮುಂಗಾರು ಬಿರುಸು ಕೃಷಿ ಕಾರ್ಯ ಚುರುಕು

neji
ನಾಟಿಗೆ ಸಿದ್ಧಗೊಂಡಿರುವ ಭತ್ತದ ಸಸಿಗಳು.
Published on

ಕುಂದಾಪುರ: ತಾಲೂಕಿನಾದ್ಯಂತ ಕಳೆದ ಹದಿನೈದು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿದೆ. ಮುಂಗಾರು ಪೂರ್ವ ಮಳೆಯಾಗುತ್ತಿದ್ದಂತೆ ಕೃಷಿ ಚಟುವಟಿಕೆ ಆರಂಭಿಸಿದ್ದ ಕೃಷಿಕರು ಮುಂಗಾರು ಆರಂಭವಾಗುತ್ತಿದ್ದಂತೆ ಬೀಜ ಬಿತ್ತನೆ ಪ್ರಕ್ರಿಯೆ ಆರಂಭಿಸಿದ್ದಾರೆ. ಕೂಲಿ ಕಾರ್ಮಿಕರ ಕೊರತೆಯಿಂದ ಬಹುತೇಕ ರೈತರು ಚಾಪೆ ನೇಜಿಯತ್ತ ಹೆಚ್ಚಿನ ಗಮನ ಹರಿಸಿದ್ದು, ಚಾಪೆ ನೇಜಿ ವಾದರಿಯಲ್ಲಿ ಭತ್ತದ ಬೀಜವನ್ನು ಬಿತ್ತನೆ ವಾಡಿದ್ದರು. ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ನಾಟಿಗೆ ಸಿದ್ಧತೆ ನಡೆಸಿದ್ದಾರೆ. ನಾಲ್ಕೈದು ದಿನಗಳಿಂದ ಮಳೆ ನಿರಂತರ ಸುರಿಯುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಮಳೆ ಹೀಗೆ ಮುಂದುವರಿದರೆ ನಾಟಿ ಕಾರ್ಯಕ್ಕೆ ತೊಂದರೆಯಾಗುವ ಆತಂಕದಲ್ಲಿದ್ದಾರೆ ರೈತರು. ತಾಲೂಕಿನ ಬಹುತೇಕ ಕಡೆ ಒಂದೆರಡು ದಿನಗಳಲ್ಲಿ ನಾಟಿ ಕಾರ್ಯ ಆರಂಭವಾಗಲಿದ್ದು, ಯಾಂತ್ರೀಕೃತ ನಾಟಿಗೆ ರೈತರು ಆಸಕ್ತಿ ವಹಿಸಿದ್ದಾರೆ. ಯಂತ್ರದ ಲಭ್ಯತೆ ಅವಲಂಬಿಸಿ ನಾಟಿ ಕಾರ್ಯ ನಡೆಸಲು ರೈತರು ಮುಂದಾಗಿದ್ದು, ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆ ವಾಡಿಕೊಳ್ಳುತ್ತಿದ್ದಾರೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಪ್ರವಾಣದಲ್ಲಿ ಬೀಜದ ದಾಸ್ತಾನು ಇದ್ದು, ಬಹುತೇಕ ರೈತರು ಬೀಜ ಖರೀದಿಸಿ ಭತ್ತದ ಸಸಿಗಳನ್ನು ಸಿದ್ಧಪಡಿಸಿದ್ದಾರೆ. ಅನೇಕ ಕಡೆಗಳಲ್ಲಿ ಭತ್ತದ ಸಸಿಗಳು ನಾಟಿಗೆ ಸಿದ್ಧಗೊಂಡಿದೆ. ಮಳೆ ಪ್ರವಾಣ ಕಡಿಮೆಯಾದರೆ ಒಂದೆರಡು ದಿನಗಳಲ್ಲಿ ಭತ್ತದ ನಾಟಿ ಕಾರ್ಯ ಪ್ರಾರಂಭವಾಗಲಿದೆ.

ಮಳೆರಾಯ ಕೃಪೆ ತೋರಿದರಷ್ಟೇ ಎಲ್ಲವೂ ಸುಸೂತ್ರವಾಗಿ ನಡೆಯಲು ಸಾಧ್ಯ. ಈಗಾಗಲೇ ಭತ್ತದ ಸಸಿಗಳು ನಾಟಿಗೆ ಸಿದ್ಧಗೊಂಡಿದ್ದು, ಒಂದೆರೆಡು ದಿನಗಳಲ್ಲಿ ನಾಟಿ ಕಾರ್ಯ ಪ್ರಾರಂಭವಾಗಲಿದೆ. ಈಗ ಸುರಿದ ಮಳೆ ಕೃಷಿ ಚಟುವಟಿಕೆಗೆ ತೊಂದರೆ ನೀಡದಿದ್ದರೂ, ಮಳೆ ಇದೇ ರೀತಿ ವ್ಯಾಪಕವಾಗಿ ಸುರಿದರೆ ನಾಟಿ ಕಾರ್ಯಕ್ಕೆ ಅಡ್ಡಿ ಉಂಟು ವಾಡುವ ಸಾಧ್ಯತೆ ಇದೆ. ವಿಜಯ ಪೂಜಾರಿ, ಕೃಷಿಕರು, ಗಂಗೊಳ್ಳಿ https://www.vijayavani.net/proposal-to-center-for-mangalore-mumbai-vande-bharat-service https://www.vijayavani.net/dangerous-trees-should-be-removed

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net